ಪುತ್ತೂರು: ಅಶಕ್ತ ಹಿರಿಯ ಜೀವಗಳಿಗೆ ಬಿರಿಯಾನಿ ಊಟ ಹಂಚುವ ಮೂಲಕ ಚಾರ್ವಿ ಕಜೆಮಾರ್ ತನ್ನ ೪ ನೇ ವರ್ಷದ ಹುಟ್ಟುಹಬ್ಬವನ್ನು ಆ.27ರಂದು ಆಚರಿಸಿಕೊಂಡಳು.
ಪುತ್ತೂರು ಬಸ್ಸು ನಿಲ್ದಾಣದಲ್ಲಿದ್ದ ಅಶಕ್ತ ಹಿರಿಯ ಜೀವಗಳಿಗೆ ಬಿರಿಯಾನಿ ಊಟವನ್ನು ಹಂಚುವ ಮೂಲಕ ವಿಭಿನ್ನವಾಗಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಚಾರ್ವಿ ಕಜೆಮಾರ್ ತನ್ನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಬೀರಮಲೆ ಪ್ರಜ್ಞಾ ಆಶ್ರಮಕ್ಕೆ ಊಟ ಕೊಡುವ ಮೂಲಕ ಆಚರಿಸಿಕೊಂಡರೆ, 2 ವರ್ಷದ ಹುಟ್ಟುವನ್ನು ಸರಳ ರೀತಿಯಲ್ಲಿ ಆಚರಿಸಿಕೊಂಡಳು 3ನೇ ವರ್ಷದ ಹುಟ್ಟುವನ್ನು 5ಕ್ಕೂ ಮಿಕ್ಕಿ ಅಂಗನವಾಡಿಗಳ ಪುಟಾಣಿಗಳಿಗೆ ಆಪಲ್ ಹಂಚುವ ಮೂಲಕ ಆಚರಿಸಲಾಯಿತು. ಚಾರ್ವಿ ಕಜೆಮಾರ್ ಪತ್ರಕರ್ತ ಸಿಶೇ ಕಜೆಮಾರ್ ಮತ್ತು ಪಂಚಾಯತ್ ಉದ್ಯೋಗಿ ಮಮತಾ ಕಜೆಮಾರ್ರವರ ಪುತ್ರಿಯಾಗಿದ್ದಾರೆ.