ಪುಣ್ಚಪ್ಪಾಡಿಯಲ್ಲಿ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ಕ್ರೀಡಾಕೂಟ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

0

ಪುತ್ತೂರು: ಪುಣ್ಚಪ್ಪಾಡಿ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ 37ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವ, ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ಕ್ರೀಡಾಕೂಟ ಹಾಗೂ ಪುಣ್ಚಪ್ಪಾಡಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ಆಗಸ್ಟ್‌ 27 ರಂದು ಪುಣ್ಚಪ್ಪಾಡಿ ಗೌರಿ ಸದನ ಸಭಾಂಗಣದಲ್ಲಿ ಜರಗಿತು.

ಬೆಳಿಗ್ಗೆ ಹಾವೇರಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸೀನಿಯರ್‌ ಮ್ಯಾನೇಜರ್‌ ಆದ ಪ್ರದೀಪ್‌ ಕುಮಾರ್‌ ಜೆ ನಾಯ್ಕ ರವರು ಧ್ವಜಾರೋಹಣ ಮಾಡಿದರು. ಬಳಿಕ ರಮೇಶ್‌ ಪುದ್ವುಣ್ಣಾಯ ರವರ ಪೌರೋಹಿತ್ಯದಿಂದ ಶ್ರೀ ಗಣಪತಿ ದೇವರ ಮೂರ್ತಿ ಪ್ರತಿಷ್ಠೆ, ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಶ್ರೀಹರಿ ಭಜನಾ ಮಂಡಳಿ ದೇವಸ್ಯ, ಶ್ರೀ ಕೃಷ್ಣಾರ್ಪಿತ ಭಜನಾ ಮಂಡಳಿ ಪುಣ್ಚಪ್ಪಾಡಿ ತಂಡದ ವತಿಯಿಂದ ಭಜನಾ ಕಾರ್ಯಕ್ರಮ, ಪುಣ್ಚಪ್ಪಾಡಿ ಗ್ರಾಮದ ಸುಮಾರು 15 ವಿದ್ಯಾರ್ಥಿ-ವಿದ್ಯಾರ್ಥಿನಿಯರಾದ ಎಸ್‌.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ, ಕ್ರೀಡಾಕೂಟಗಳಾದ ಸಾರ್ವಜನಿಕ ಕಬಡ್ಡಿ, ಕಾಲೇಜು ವಿಭಾಗದ ಕಬಡ್ಡಿ, ಪುರುಷರ ಹಗ್ಗಜಗ್ಗಾಟ, ಮಹಿಳೆಯರ ಹಗ್ಗಜಗ್ಗಾಟ, ಗ್ರಾಮಸ್ಥರಿಗಾಗಿ ಕಬಡ್ಡಿ ಪಂದ್ಯಾಟ, ಮೊಸರು ಕುಡಿಕೆ, ಅಡ್ಡಕಂಬದ ಸ್ಪರ್ಧೆ, ಅಂಗನವಾಡಿ, ಪ್ರಾರ್ಥಮಿಕ, ಪ್ರೌಢಶಾಲೆಯ ಬಾಲಕ-ಬಾಲಕಿಯರಿಗೆ ಭಕ್ತಿಗೀತೆ, ಸಂಗೀತ ಕುರ್ಚಿ, ಗೋಣಿಚೀಲ ಓಟ, ಹಿಮ್ಮುಖ ಓಟ, ಪುಸ್ತಕ ನಡಿಗೆ ಮೊದಲಾದ ಸ್ಪರ್ಧೆಯು ನಡೆಯಿತು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂಜೆ ಶ್ರೀ ಮಹಾಗಣಪತಿ ದೇವರ ಮಹಾಪೂಜೆ ನಡೆದು ಶೋಭಾಯಾತ್ರೆಯೊಂದಿಗೆ ಶ್ರೀ ಗಣಪತಿ ದೇವರ ಜಲಸ್ತಂಭನ ಮಾಡಲಾಯಿತು. ಮಧ್ಯಾಹ್ನ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಜನರು ಅನ್ನಸಂತರ್ಪಣೆಗೆ ಭಾಗಿಯಾದರು. ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ದೇವಸ್ಯ, ಅಧ್ಯಕ್ಷ ಮಹೇಶ್‌ ಕೆ ಸವಣೂರು, ಕಾರ್ಯದರ್ಶಿ ಪ್ರಮೋದ್‌ ಬೊಳ್ಳಾಜೆ, ಜೊತೆ ಕಾರ್ಯದರ್ಶಿ ನಿತಿನ್‌ ಪೂಜಾರಿಮೂಲೆ, ಕೋಶಾಧಿಕಾರಿ ಯತೀಶ್‌ ಕೊಂಬಕೆರೆ, ಉಪಾಧ್ಯಕ್ಷರಾದ ವಸಂತ ಗೌಡ ಬೆದ್ರಂಪಾಡಿ, ವೇದಾವತಿ ಅಂಜಯ, ಜೊತೆ ಕಾರ್ಯದರ್ಶಿ ಪ್ರತೀಕ್‌ ಬೆದ್ರಂಪಾಡಿ, ಸದಸ್ಯರಾದ ಬಾಲಕೃಷ್ಣ ರೈ ದೇವಸ್ಯ, ನವೀನ್‌ ಶೆಟ್ಟಿ ನೂಜಾಜೆ, ಪುಟ್ಟಣ್ಣ ಗೌಡ ಬದಿಯಡ್ಕ, ಸೇಸಮ್ಮ ನೂಜಾಜೆ, ರಾಜೇಶ್ವರಿ ಕನ್ಯಾಮಂಗಲ, ರಾಜು ಕುಲಾಲ್‌ ಪುಣ್ಚಪ್ಪಾಡಿ, ಗೌರಿ ಗಣೇಶ ಸೇವಾ ಟ್ರಸ್ಟಿನ ಅಧ್ಯಕ್ಷ ಸಚಿನ್‌ ಕುಮಾರ್‌ ಜೈನ್‌, ಟ್ರಸ್ಟಿಗಳಾದ ನಾಗರಾಜ್‌ ನಿಡ್ವಣ್ಣಾಯ, ಶೀನಪ್ಪ ಶೆಟ್ಟಿ ನೆಕ್ಕರಾಜೆ, ಪುಟ್ಟಣ್ಣ ಗೌಡ ಬದಿಯಡ್ಕ, ಲಿಂಗಪ್ಪ ರೈ ಚೆಂಬುತ್ತೋಡಿ, ಸತೀಶ್‌ ಪೂಜಾರಿ ನೇರೋಳ್ತಡ್ಕ, ಪಿ.ಡಿ ಗಂಗಾಧರ್‌ ರೈ, ಕಟ್ಟೆ ಉತ್ಸವ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಗೌಡ, ಗೌರವಾಧ್ಯಕ್ಷ ಮೋಹನ್‌ ದೇವಾಡಿಗ, ರಾಮಚಂದ್ರ ಕೊಳಂಬೆತ್ತಡ್ಕ, ಬಾಬು ಗೌಡ ಪೂಜಾರಿಮೂಲೆ, ಚೇತನ್‌ ಓಂತಿಮನೆ, ತೀರ್ಥನ್‌ ಬೊಳ್ಳಾಜೆ, ದಿಲೀಪ್‌ ಹೆಗ್ಗಡೆ ನೇರೋಳ್ತಡ್ಕ, ಮನೋಹರ ತೋಟದಡ್ಕ, ಕರುಣಾಕರ ಸಾರಕರೆ, ಅಕ್ಷತ್‌ ತೋಟದಡ್ಕ, ಪ್ರಶಾಂತ್‌ ನೂಜಾಜೆ, ಮೋಹಿತ್‌ ಪೂಜಾರಿಮೂಲೆ, ಚರಣ್‌ ಓಂತಿಮನೆ, ಪೂರ್ಣಿಮ ಮಹೇಶ್‌, ಆಶಾ ರೈ ಕಲಾಯಿ, ಅಂಗನವಾಡಿ ಕಾರ್ಯಕರ್ತೆ ಜಾನಕಿ, ರಕ್ಷಿತ್‌ ನೂಜಾಜೆ, ವಿನುತ್‌ ಬೆದ್ರಂಪಾಡಿ, ರಾಘವೇಂದ್ರ ಕೊಳಂಬೆತ್ತಡ್ಕ, ಸಚಿನ್‌ ಕಾರೆತ್ತೋಡಿ, ಗಣೇಶ್‌ ಕಾರೆತ್ತೋಡಿ, ಗಣೇಶ್‌ ಕೊಳಂಬೆತ್ತಡ್ಕ, ಕೀರ್ತನ್‌ ಬದಿಯಡ್ಕ, ಗಗನ್‌, ಉಲ್ಲಾಸ್‌, ನಿತೇಶ್‌ ಸಹಕರಿಸಿದರು.

LEAVE A REPLY

Please enter your comment!
Please enter your name here