ಕಡಬ: ಇಲ್ಲಿನ ವಿದ್ಯಾನಗರದಲ್ಲಿರುವ ವ್ಯಕ್ತಿಯೋರ್ವರಿಗೆ ಹುಚ್ಚುನಾಯಿ ಕಡಿದು ಗಂಭೀರ ಗಾಯಗೊಂಡ ಘಟನೆ ಆ.29ರಂದು ನಡೆದಿದೆ.
ಕಡಬ ವಿದ್ಯಾನಗರ ನಿವಾಸಿ ಕೊರಗಪ್ಪ ಗೌಡ ಆದ್ರ ಎಂಬವರಿಗೆ ಇಂದು(ಆ.29) ಬೀದಿಯಲ್ಲಿ ಅಲೆದಾಡುತ್ತಿದ್ದ ಹುಚ್ಚು ನಾಯಿ ಕಚ್ಚಿದೆ. ಕೂಡಲೇ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕೊಂಡೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಆಸ್ಪತ್ರೆಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಪಟ್ಟಣ ಪಂಚಾಯತ್ ಸದಸ್ಯ ಹನೀಫ್ ಕೆ.ಎಂ. ಸೇರಿದಂತೆ ಹಲವಾರು ಮಂದಿ ತೆರಳಿ ವಿಚಾರಿಸಿದರು.
ಕಡಬ ಭಾಗದಲ್ಲಿ ಬೀದಿ ನಾಯಿಗಳ ಹೆಚ್ವಿದ್ದು ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ನಾಯಿಗಳ ಉಪಟಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.