ಕಡಬ: ಇಂದು(ಆ.29) ಕಡಬದಲ್ಲಿ ಗಣಪತಿ ವಿಸರ್ಜನೆ ಇರುವುದರಿಂದ ಕಡಬ ಪೇಟೆಯಲ್ಲಿ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡದಂತೆ ಕಡಬ ಠಾಣೆಯ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.29ರ ಮದ್ಯಾಹ್ನ 12.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ ನಗರದಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇದಿಸಿದೆ. ಎಲ್ಲಾ ವಾಹನದ ಮಾಲೀಕರು ತಮ್ಮ ವಾಹನಗಳನ್ನು ಅನುಗ್ರಹ ಹಾಲ್ ನಿಂದ ಕಡಬ ಜಂಕ್ಷನ್ ಬಸ್ಟ್ಯಾಂಡ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲ್ಲಿಸದಂತೆ ಸೂಚನೆ ನೀಡಿದ್ದಾರೆ.