ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 11ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮವು ಶಿವನಾರಾಯಣ ಭಟ್ ಇವರ ನೇತೃತ್ವದಲ್ಲಿ ಆ.27ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಮಹಿಳಾ ತಂಡದ ಕುಣಿತ ಭಜನೆಯನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷ ಗೋಕುಲ್‌ನಾಥ್ ಪಿ.ವಿ. ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ನಂತರ ಇರ್ದೆ ಬೆಟ್ಟಂಪಾಡಿ ಮಹಿಳಾ ಭಜನಾ ತಂಡದಿಂದ ಕುಣಿತ ಭಜನೆ ನಡೆಸಿಕೊಟ್ಟರು.ವಿದ್ಯಾರ್ಥಿನಿ ಆದಿತ್ಯಾ ಹಾಗೂ ಆರುಷಿ ಸುನಿಲ್ ಶೆಟ್ಟಿ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಶೋಭಾಯಾತ್ರೆ
ಶೋಭಾಯಾತ್ರೆಯು ಪುತ್ತೂರು ಧರ್ಮಸ್ಥಳ ಬಿಲ್ಡಿಂಗ್‌ನಿಂದ ಮುಖ್ಯರಸ್ತೆಯಲ್ಲಿ ಅರುಣ ಚಿತ್ರಮಂದಿರ, ಏಳ್ಮುಡಿ ಕಲ್ಲಾರೆಯಿಂದ ಹಿಂತಿರುಗಿ, ಮುಖ್ಯರಸ್ತೆ ಬಸ್‌ಸ್ಟ್ಯಾಂಡ್ ಸಂಜೀವ ಶೆಟ್ಟಿ, ಹೋಟೆಲ್ ಹರಿಪ್ರಸಾದ್, ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಾಗಿ ದೇವಸ್ಥಾನ ಮಾರುಗದ್ದೆಯಲ್ಲಿ ಇರುವ ಜೋಡುಕೆರೆಯಲ್ಲಿ ಜಲಸ್ತಂಭನಗೊಂಡಿತು.
ಶ್ರೀ ಮಹಮ್ಮಾಯಿ ಮರಾಠಿ ಭಜನಾ ಸಂಘ, ಮುಡಾಲಮೂಲೆ ಬೆಟ್ಟಂಪಾಡಿ, ವನಶಾಸ್ತಾರ ಮಕ್ಕಳ ಭಜನಾ ತಂಡ ಆಲಂತಡ್ಕ ಹೊಸನಗರ ಪಟ್ಟೆ ಪುತ್ತೂರು ಮತ್ತು ಶ್ರೀ ಮಣಿಕಂಠ ಶ್ರೀ ರಾಮನಗರ ರೆಂಜ ಇವರಿಂದ ಸಿಂಗಾರಿಮೇಳ, ಚಕ್ರವರ್ತಿ ನಾಸಿಕ್ ಬ್ಯಾಂಡ್, ವಿದ್ಯಾರ್ಥಿಗಳಿಂದ ಕೊಡವ ಸಾಂಪ್ರಾದಾಯಿಕ ನೃತ್ಯ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ., ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್, ಮೇಘ ಗೋಕುಲ್, ಅಕ್ಷಯ್‌ಕುಮಾರ್, ಆಯುಷ್ಯ ಅಕ್ಷಯ್, ವಿಜೇತ ನವೀನ್, ನವೀನ್‌ಕುಮಾರ್, ಲಲನ ಗೋಪಿನಾಥ್, ನಾರಾಯಣ ರೈ ಕುಕ್ಕುವಳ್ಳಿ, ಅರುಣ್ ಪುತ್ತಿಲ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಮುಖ್ಯ ಶಿಕ್ಷಕಿ, ಉಪನ್ಯಾಸಕ ವೃಂದ, ಉಪನ್ಯಾಸಕೇತರ ವೃಂದ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಲಕ್ಕಿ ಡ್ರಾ. ವಿಜೇತರು
ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ನಡೆದ ಏಕದಶ ವರುಷದ ವಿದ್ಯಾ ಗಣಪತಿ ಉತ್ಸವದ ಲಕ್ಕಿ ಡ್ರಾ. ವಿಜೇತರು: ಪ್ರಥಮ ಬಹುಮಾನ: 0951 ಶಾರದಾ ಅನೇಜ, ದ್ವಿತೀಯ ಬಹುಮಾನ: 0133 ಮಹೇಶ್, ತೃತೀಯ ಬಹುಮಾನ: 0751 ಸುಮಿತ್ರಾ ಪಿ ಇವರಿಗೆ ಬಂದಿರುತ್ತದೆ.