ಪುತ್ತೂರು: ವಿದ್ಯಾಭಾರತಿ ರಾಜ್ಯಮಟ್ಟದ ಮತ್ತು ದಕ್ಷಿಣ ಮಧ್ಯ ಕ್ಷತ್ರಿಯ ಮಟ್ಟದ ಈಜು ಸ್ಪರ್ಧೆಯು ಆ.22ರಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬನಶಂಕರಿ ಬೆಂಗಳೂರು ಇಲ್ಲಿ ನಡೆದಿದ್ದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ನಮನ್ ನಾಯಕ್ ಮತ್ತು ವಿ ವೈಷ್ಣವ್ ಇವರು ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ನಮನ್ ನಾಯಕ್ (ಸಂದೀಪ್ ನಾಯಕ್ ಮತ್ತು ನಮಿತಾ ನಾಯಕ್ ದಂಪತಿ ಅವರ ಪುತ್ರ) 100 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿಯ ಪದಕ ಮತ್ತು 50 ಮೀಟರ್ ಬಟರ್ ಫ್ಲೈನಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ವಿ. ವೈಷ್ಣವ್ (ವೀರಪ್ಪ ಮತ್ತು ಶ್ವೇತ ದಂಪತಿಯವರ ಪುತ್ರ) 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ. ಇವರು ನವೆಂಬರ್ 14 ರಿಂದ 17ರವರೆಗೆ ಮಧ್ಯಪ್ರದೇಶದದಲ್ಲಿ ನಡೆಯುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ.