ಪುತ್ತೂರು: ಪುತ್ತೂರಿನಲ್ಲಿ ಈ ಬಾರಿ ಓಣಂ ರಸದೌತಣ ಎಲ್ಲರಿಗೂ ಲಭ್ಯವಾಗಲಿದೆ. ಕಳೆದೆರಡು ವರ್ಷದಿಂದ ಶುದ್ಧ ಹಾಗೂ ಸಾಂಪ್ರದಾಯಿಕ ಶೈಲಿಯ ತಿಂಡಿ ತಿನಿಸುಗಳನ್ನು ನೀಡುತ್ತಿರುವ ‘ಹೋಮ್‌ಲಿ ಬೈಟ್ಸ್’ ಈ ಬಾರಿ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಓಣಂ ಹಬ್ಬದ ಪ್ರಯುಕ್ತ ಓಣಂ ಔತಣವನ್ನು ಸಾದರಪಡಿಸುತ್ತಿದೆ.
ಓಣಂ ಹಬ್ಬದ ಪ್ರಯುಕ್ತ ನೆರೆ ರಾಜ್ಯ ಕೇರಳದಲ್ಲಿ ಜಾತಿ,ಮತ, ರಾಜಕೀಯ ಬೇಧ ಇಲ್ಲದೆ ಬಹಳ ಮುಖ್ಯವಾಗಿ ಆಚರಿಸುವ ಓಣಂ ಹಬ್ಬದ ಸಂದರ್ಭದಲ್ಲಿ ಪುತ್ತೂರಲ್ಲಿ ಎಲ್ಲರಿಗೂ ಮುಕ್ತವಾಗಿ ಬಾಳೆಎಲೆಯಲ್ಲಿ ಕಾಳನ್, ಓಲನ್ , ಅಡ ಪ್ರಥಮನ್ ಇತ್ಯಾದಿ 25 ಮಿಕ್ಕಿ ಸಾಂಪ್ರದಾಯಿಕ ಪದಾರ್ಥಗಳೊಂದಿಗೆ ಸೆಪ್ಟೆಂಬರ್ 5ರಂದು ಮಧ್ಯಾಹ್ನ 12 ರಿಂದ 2:30ರವರೆಗೆ ಊಟದ ವ್ಯವಸ್ಥೆ ಆಯೋಜಿಸಲಾಗಿದ್ದು, homelybites.co.in ಎಂಬ ವೆಬ್ಸೈಟ್ ಅಥವಾ ಫೇಸ್ಬುಕ್ ಪೇಜ್ ನಲ್ಲಿ ಮುಂಗಡ ಬುಕ್ಕಿಂಗ್ ಮೂಲಕ ಊಟದ ವ್ಯವಸ್ಥೆ ಕಾಯ್ದಿರಿಸಬಹುದಾಗಿದೆ.