ಸೆ.2 ರಂದು ಅಶ್ವಿನ್ ಐ ಕ್ಲಿನಿಕ್ & ಆಪ್ಟಿಕಲ್ಸ್ ಶುಭಾರಂಭ

0

ಪುತ್ತೂರು: ನೇತ್ರ ತಜ್ಞ ಡಾ.ಅಶ್ವಿನ್ ಸಾಗರ್ ಅವರ ಕಣ್ಣಿನ ಪರೀಕ್ಷಾ ಕೇಂದ್ರ ಅಶ್ವಿನ್ ಐ ಕ್ಲಿನಿಕ್ & ಆಪ್ಟಿಕಲ್ಸ್ ಪುತ್ತೂರಿನ ಅರುಣ ಕಲಾಮಂದಿರದ ಮುಂಭಾಗದಲ್ಲಿರುವ ಕಣ್ಣನ್ಸ್ ಕಾಂಪ್ಲೆಕ್ಸ್‌ನಲ್ಲಿ ಸೆ.2 ರಂದು ಮಧ್ಯಾಹ್ನ 12.30ಕ್ಕೆ ಶುಭಾರಂಭಗೊಳ್ಳಲಿದೆ.


ಶಾಸಕ ಅಶೋಕ್ ಕುಮಾರ್ ರೈ ಅವರು ಕ್ಲಿನಿಕ್ ಮತ್ತು ಆಪ್ಟಿಕಲ್ಸ್ ಕೇಂದ್ರವನ್ನು ಉದ್ಘಾಟಿಸಲಿದ್ದು, ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಪಿ. ಗೌರಿ ಪೈ, ದೇರಳಕಟ್ಟೆ ಯೇನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೇತ್ರವಿಜ್ಞಾನ ವಿಭಾಗದ ಫ್ರೊ. ಡಾ.ಉಮಾ ಕುಲ್ಕರ್ಣಿ, ಪುತ್ತೂರಿನ ಸೈಂಟ್ ಫಿಲೋಮಿನ ಪದವಿ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲ ಫಾದರ್ ಪ್ರಕಾಶ್ ಮೊಂತೇರೊ, ಉದ್ಯಮಿ ರೊ| ಎಂ.ಜಿ.ರಫೀಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನಲ್ಲಿ ಕಳೆದ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಣ್ಣಿನ ಕಂಪ್ಯೂಟರೀಕೃತ ಪರೀಕ್ಷಾ ಕೇಂದ್ರ ಅಶ್ಚಿನ್ ಐ ಕ್ಲಿನಿಕ್ & ಆಪ್ಟಿಕಲ್ಸ್ ಉಪ್ಪಿನಂಗಡಿ ಹಾಗೂ ಕಡಬದಲ್ಲಿ ಸಹಸಂಸ್ಥೆಗಳನ್ನು ಹೊಂದಿದೆ.

ಎರಡು ಆಫರ್-ಒಂದು ಆಯ್ಕೆ
ಅಶ್ಚಿನ್ ಐ ಕ್ಲಿನಿಕ್ & ಆಪ್ಟಿಕಲ್ಸ್ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ಎರಡು ಆಫರ್‌ಗಳನ್ನು ಘೋಷಿಸಿದ್ದು, ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಂದು ಕನ್ನಡಕ ಕೊಂಡಲ್ಲಿ ಇನ್ನೊಂದು ಕನ್ನಡಕ ಉಚಿತವಾಗಿ ಪಡೆಯಬಹುದಾಗಿದೆ. ಈ ಆಫರ್ ಬೇಡವೆಂದರೆ, ಒಂದು ಕನ್ನಡಕ ಖರೀದಿ ಮೇಲೆ ಶೇ.30ರಷ್ಟು ರಿಯಾಯಿತಿ ಪಡೆಯಬಹುದಾಗಿದೆ ಎಂದು ನಿವೃತ್ತ ನೇತ್ರಾಧಿಕಾರಿ ಎಸ್.ಶಾಂತರಾಜ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here