




ಪುತ್ತೂರು: ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ 68ನೇ ಸಾರ್ವಜನಿಕ ಮಹಾ ಗಣೇಶೋತ್ಸವದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ನಿಂದ ಸಾಂಸ್ಕೃತಿಕ ವೈಭವ ನಡೆಯಿತು. ಗಾಯನದಲ್ಲಿ ಅಧ್ಯಕ್ಷೆ ಅಂಕಣಗಾರ್ತಿ ಮಲ್ಲಿಕಾ ಜೆ ರೈ, ಕವಿ ಪದ್ಮನಾಭ ಪೂಜಾರಿ, ಸುರೇಶ್ ರಾವ್, ಶಿಕ್ಷಕಿ ಶುಭಾ ರೈ, ಭೂಮಿಕಾ ಭಾಗವಹಿಸಿದರು. ನಿರೀಕ್ಷಾ ಬಿ, ಕಾವ್ಯ ಶ್ರೀ, ಭೂಮಿಕಾ ನೃತ್ಯದಲ್ಲಿ ಪ್ರೇಕ್ಷಕರ ಮನ ರಂಜಿಸಿದರು. ಕೋಶಾಧಿಕಾರಿ ಸುಮಂಗಲ ಶೆಣೈ, ಪೂರ್ಣಿಮಾ ಮಲ್ಯ ಸಹಕರಿಸಿದರು. ವಿಜಯ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: ಸಾಂಸ್ಕೃತಿಕ ವೈಭವ











