ಪುತ್ತೂರು: ಅಜಲಾಡಿಬೀಡು ದಿ.ವಿಠಲದಾಸ್ ಪಕ್ಕಳರವರ ಪತ್ನಿ ಸುಭಾಷಿನಿ ವಿಠಲದಾಸ್ ಪಕ್ಕಳ( 75 ವ)ರವರು ಆ.30ರಂದು ಮರೀಲ್ನ ಸೃಗೃಹದಲ್ಲಿ ನಿಧನರಾದರು.

ಬೆಳ್ಳಿಪ್ಪಾಡಿ ಯಜಮಾನ ಸಂಕಪ್ಪ ರೈಯವರ ಮೊಮ್ಮಗಳು, ಕುಂಡಕೋಳಿ ಅರೈ ಶೆಟ್ಟಿಯವರ ಪುತ್ರಿ, ಕರ್ನಲ್ ಜಗಜೀವನ್ ಭಂಡಾರಿ ಮತ್ತು ಆರ್ಬಿಐ ಮಾಜಿ ನಿರ್ದೇಶಕ ಅಗರಿ ನವೀನ್ ಭಂಡಾರಿರವರ ಚಿಕ್ಕಮ್ಮನ ಮಗಳಾಗಿರುವ ಸುಭಾಷಿನಿ ವಿಠಲದಾಸ ಪಕ್ಕಳರವರು ಪುತ್ರರಾದ ಮಹೇಶ್ ಪಕ್ಕಳ, ನಿತಿನ್ ಪಕ್ಕಳ ಹಾಗೂ ರಾಜೇಶ್ ಪಕ್ಕಳ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಸಹೋದರಿಯರಾದ ಸುಹಾಸಿನಿ ರೈ, ಸುಮಲಿನಿ ರೈ ಹಾಗೂ ಸಹೋದರ ಕೃಷ್ಣರಾಜ್ ಶೆಟ್ಟಿರವರನ್ನು ಅಗಲಿದ್ದಾರೆ. ಮೃತರ ಮನೆಗೆ ರಾಜಕೀಯ, ಸಾಮಾಜಿಕ ಮುಂದಾಳುಗಳು, ಉದ್ಯಮಿಗಳು ಭೇಟಿ ನೀಡಿ ಸಂತಾಪ ಸೂಚಿಸಿದರು.