ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಸೆ.22ರಿಂದ ಸೆ.30ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಅರ್ಚಕರಾದ ನಾಗೇಶ ಕುದ್ರೆತ್ತಾಯ, ಸಹ ಅರ್ಚಕರಾದ ಅಚ್ಯುತ್ತ ಭಟ್, ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಎಂ ಚಂದು ಗೌಡ ಕಲ್ಪಣೆ, ಯದುಕುಮಾರ್ ಕಲ್ಪಣೆ, ಮೋಹನ ಕಲ್ಪಣೆ, ಶಿವರಾಜ್ ಕಲ್ಪಣೆ, ಭವೀಷ್, ನೀಲಮ್ಮ, ಶ್ವೇತಾ, ರಮೇಶ್ ಮಿಜಾರು, ಮಾನ್ಯ ಮಿಜಾರು ಉಪಸ್ಥಿತರಿದ್ದರು.