ಪುತ್ತೂರು: JCI ಇಂಡಿಯಾ ವಲಯ 15 ರ ಬೆಳವಣಿಗೆ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಅತ್ಯುತ್ತಮ ತರಬೇತುದಾರಿಗೆ ನೀಡುವ ‘ಪ್ರೇರಣಾ ಪ್ರಶಸ್ತಿ’ ದೊರಕಿದೆ. ಆ.24ರಂದು ಕಾರ್ಕಳದ ಹೋಟೆಲ್ ಬಾಲಾಜಿ ಇನ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ವಲಯ 15ರ ವಲಯಧ್ಯಕ್ಷರಾದ ಅಭಿಲಾಷ್ B A ರವರು ಗೌರವಿಸಿದರು.
JCI ಯಲ್ಲಿ ಅತ್ಯುತ್ತಮ ತರಬೇತುದಾರರಾಗಿ ನೂರಾರು ತರಬೇತಿಗಳನ್ನು ನೀಡುತ್ತಾ ಬಂದಿರುವ ಇವರ ಸಾಧನೆಯನ್ನು ಗುರುತಿಸಿ JCI ಪುತ್ತೂರು ಘಟಕದಿಂದ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು, ಸದ್ಯ ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಮಾರ್ಕ್ ಟೆಲಿಕಾಂ ನ ಮಾಲಕರಾಗಿರುವ ಇವರು ಧರ್ಮಪತ್ನಿ JC ಸ್ವಾತಿ ಎಸ್ ರೈ ಮತ್ತು ಮಕ್ಕಳಾದ ಸಹರ್ ಎಸ್ ರೈ ಹಾಗೂ ಹಾಗೂ ಸಿಯಾರ ಎಸ್ ರೈ ರೊಂದಿಗೆ ಪುತ್ತೂರಿನಲ್ಲಿ ನೆಲೆಸಿರುತ್ತಾರೆ. JCI ಪುತ್ತೂರು ಘಟಕದ ಪೂರ್ವಧ್ಯಕ್ಷ ಮುಂಡಾಲ ಗುತ್ತು ಶಶಿರಾಜ್ ರೈ ಅಗಲ್ಪಾಡಿ ಮೋಹನ್ ರೈ ಮತ್ತು ಮುಂಡಾಲ ಗುತ್ತು ಕೃಷ್ಣಕುಮಾರಿ ಎಂ ರೈ ದಂಪತಿಗಳ ಪುತ್ರ.