ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ -ಪುತ್ತೂರು ಹಾಗೂ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇದರ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪುತ್ತೂರು ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲೆ ಇಲ್ಲಿನ 9ನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯ ಇವರು traditional single ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಈಕೆಗೆ ಸಾಂದೀಪನಿ ವಿಧ್ಯಾ ಸಂಸ್ಥೆಯ ಯೋಗ ಶಿಕ್ಷಕ ನವೀನ್ ಕುಮಾರ್ ತರಬೇತಿ ನೀಡುವುದರ ಜೊತೆಗೆ ಪ್ರಸ್ತುತ ರಾಮಕೃಷ್ಣ ಶಾಲಾ ಯೋಗ ಶಿಕ್ಷಕ ಅಜಿತ್ ತರಬೇತಿ ನೀಡಿರುತ್ತಾರೆ. ಇವರು ವೀರಮಂಗಲ ಡೆಬ್ಬೆಲ್ಲಿ ವಿಜಯ್ ಕುಮಾರ್ ಹಾಗೂ ಹೇಮಾವತಿಯವರ ಪುತ್ರಿ.