ಪುತ್ತೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ಇವರು 2024-2025ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಬೃಂದಾವನ ನಾಟ್ಯಾಲಯದ ಕುಂಬ್ರ, ಪುತ್ತೂರು ಹಾಗೂ ಸುಬ್ರಹ್ಮಣ್ಯ ಶಾಖೆಯ ವಿದ್ಯಾರ್ಥಿಗಳೆಲ್ಲರೂ ವಿಶೀಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ.100 ಫಲಿತಾಂಶವನ್ನು ಪಡೆದಿರುತ್ತಾರೆ.
ಎರಡು ವಿಭಾಗಗಳ ಒಟ್ಟು 25 ಮಂದಿ ವಿದ್ಯಾರ್ಥಿಗಳು ಬೃಂದಾವನಾ ನಾಟ್ಯಾಲಯದ ನೃತ್ಯ ಗುರು ವಿದುಷಿ ರಶ್ಮಿ ದಿಲೀಪ್ ರೈ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಜಾಹ್ನವಿ ಹಾಗೂ ಶ್ರಾವ್ಯ ಉತ್ತೀರ್ಣರಾಗಿದ್ದಾರೆ. ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕುಂಬ್ರ ಶಾಖೆಯ ಲಹರಿ ಎಸ್, ಸಾಕ್ಷಿ ರೈ, ಶರಣ್ಯ ಕೆ.ಆರ್, ಪ್ರತೀಕ್ಷಾ ಕೆ, ಚಾರ್ವಿ ವಿ ರೈ, ಸಾನ್ವಿ ರೈ, ಚಾರ್ವಿರಘು, ಮನಿಷಾ ಕೆ. ರೈ, ತೇಜಶ್ರೀ ಪಿ.ವಿ., ಪುತ್ತೂರು ಶಾಖೆಯ ಸ್ತುತಿ, ಖುಷಿ, ವರ್ಷಿಣಿ ಪಿ, ಯುಕ್ತಾ ಎ, ರಿಧಿ ಎಸ್.ಕೆ, ತ್ರೀಷಾ, ತನ್ವಿ, ನಿಸಿತಾ ಎಂ, ಸುಬ್ರಹ್ಮಣ್ಯ ಶಾಖೆಯ ನವಣ್ಯ ಗಣೇಶ್, ವರ್ಷಿಕಾ ಎ, ದಕ್ಷಾ ಕೆ, ಅನುಷಾ ಎ.ಜಿ, ಅಮೃತಾ ಎಸ್, ದಿಯಾ ಎ, ಸಾನ್ವಿ ಕೆ.ಎಚ್, ವಿಶೀಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.