ಪುತ್ತೂರು: ಕುಂಬ್ರದಲ್ಲಿ ಯುವತಿಯರ ಮುಂದೆ ಅನುಚಿತ ವರ್ತನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ವಿಟ್ಲ ಮೂಲದ ವ್ಯಕ್ತಿಯ ವಿರುದ್ಧ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಟ್ಲದ ರಾಜೇಶ್(32ವ) ಆರೋಪಿ. ಈತ ಕುಂಬ್ರದಲ್ಲಿ ಯುವತಿಯವರ ಮುಂದೆ ಅನುಚಿತವಾಗಿ ವರ್ತಿಸುತ್ತಿರುವ ಕುರಿತು ಪರ್ಪುಂಜದ ಮಹಿಳೆಯರಿಬ್ಬರು ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.