ಪುತ್ತೂರು: ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಸವಣೂರು ಚಾಪಳ್ಳದಲ್ಲಿ ಮುಸ್ಲಿಂ ಯುವಕರು(ಸಹೋದರರು) ಸಿಹಿ ತಿಂಡಿ ಹಂಚುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಚಾಪಳ್ಳದ ಸಹೋದರರಾದ ಶರೀಫ್ ಸಿ ಎಚ್, ರಝಾಕ್ ಸಿ.ಎಚ್ ಸವಣೂರು, ಅಶ್ರಫ್ ಸಿಚ್ ಮೊದಲಾದವರು ಸಿಹಿ ತಿಂಡಿ ಹಂಚಿದರು. ಮೆರವಣಿಗೆಯಲ್ಲಿ ಸಾಗಿ ಬಂದ ಭಕ್ತಾದಿಗಳಿಗೆ ಸಿಹಿ ತಿಂಡಿ ಹಂಚಿರುವ ಮುಸ್ಲಿಂ ಸಹೋದರರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.