ಪಾಲ್ತಾಡಿ: ತೋಡಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

0

ಸವಣೂರು : ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಪಾರ್ಲ- ಕಲ್ಲಗಂಡಿ ಎಂಬಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಬಗ್ಗೆ ಸೆ.3ರಂದು ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಕೊಳ್ತಿಗೆ ಗ್ರಾಮದ ಬಾಯಂಬಾಡಿ ನಿವಾಸಿ ದಿ.ಕೃಷ್ಣ ಮಣಿಯಾಣಿ ಎಂಬವರ ಪುತ್ರ ಶಿವರಾಮ ಮಣಿಯಾಣಿ  (38ವ.) ಎಂದು ಗುರುತಿಸಲಾಗಿದೆ.

ಶಿವರಾಮ ಮಣಿಯಾಣಿ ಅವರು ಬಾಯಂಬಾಡಿಯಲ್ಲಿ  ಆಕಸ್ಮಿಕವಾಗಿ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು,ವಿಪರೀತ ಮಳೆ ಸುರಿದ ಪರಿಣಾಮ ನೀರಿನ ಪ್ರಮಾಣ ಹೆಚ್ಚಳವಾಗಿದ್ದರಿಂದ ನೀರಿನಲ್ಲಿ  ಕೊಚ್ಚಿಕೊಂಡು ಕಲ್ಲಂಗಡಿಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೃತರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.ಸ್ಥಳಕ್ಕೆ ಬೆಳ್ಳಾರೆ ಠಾಣಾ ಎಸೈ ಡಿ.ಎನ್.ಈರಯ್ಯ ಹಾಗೂ ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here