




ನೆಲ್ಯಾಡಿ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸ್ಥಾಪನಾ ದಿನಾಚರಣೆಯನ್ನು ನೆಲ್ಯಾಡಿ ಶಾಖೆಯಲ್ಲಿ ಸೆ.2ರಂದು ಆಚರಿಸಲಾಯಿತು.



ಸಂಘದ ನಿರ್ದೇಶಕಿ ಸುಪ್ರೀತಾ ರವಿಚಂದ್ರ ಉದ್ಘಾಟಿಸಿ ಮಾತನಾಡಿ, 2002ರ ಸೆ.2ರಂದು ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಜಗನ್ನಾಥ ಬೊಮ್ಮೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪ್ರಾರಂಭಗೊಂಡಿತು. 2014ರ ಜೂ.8ರಂದು ನೆಲ್ಯಾಡಿ ಶಾಖೆ ಆರಂಭಗೊಂಡಿದ್ದು, ಪ್ರಸ್ತುತ ಸಂಘವು 10 ಶಾಖೆಗಳ ಮೂಲಕ ಸಕ್ರಿಯವಾಗಿ ವ್ಯವಹಾರ ನಡೆಸುತ್ತಿದೆ. 7693ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ. ಸಂಘವು ಉತ್ತಮ ಪ್ರಗತಿಪರ ವ್ಯವಹಾರ ನಡೆಸಿ ಸಮುದಾಯದ ಆರ್ಥಿಕ ಬಲವರ್ಧನೆಯಲ್ಲಿ ಶ್ರೇಷ್ಠ ಪಾತ್ರವಹಿಸಿದೆ ಎಂದು ಹೇಳಿದರು.





ನೆಲ್ಯಾಡಿ ಶಾಖೆ ಸಲಹಾ ಸಮಿತಿ ಸದಸ್ಯರಾದ ನಾಗೇಶ್ ನುಳಿಯಾರ್, ಸುರೇಶ್ ಪಡಿಪಂಡ, ಜಿನ್ನಪ್ಪ ಗೌಡ ಪೊಸೊಳಿಗೆ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಶಾಖಾ ಪ್ರಬಂಧಕಿ ತೇಜಸ್ವಿನಿ, ಕಿರಿಯ ಗುಮಾಸ್ತ ವಿಜಯ್ ಕುಮಾರ್ ಎಂ, ಅಟೆಂಡರ್ ಅಜಿತ್ ಬಿ.ಕೆ., ಪಿಗ್ಮಿ ಸಂಗ್ರಾಹಕರಾದ ತೀರ್ಥೇಶ್, ಶಿವಪ್ರಸಾದ್ ಉಪಸ್ಥಿತರಿದ್ದರು.








