ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಮಹತ್ವದ ಬದಲಾವಣೆ

0

ಮಧ್ಯಮ, ಕಡಿಮೆ ಆದಾಯದ ಕುಟುಂಬಗಳಿಗೆ ಗಣನೀಯವಾಗಿ ಉಳಿತಾಯ – ಆರ್.ಸಿ ನಾರಾಯಣ ರೆಂಜ

ಪುತ್ತೂರು: ಜಿಎಸ್‌ಟಿ ಕೌನ್ಸಿಲ್‌ನ 56 ನೇ ಸಭೆಯಲ್ಲಿ, ಅಗತ್ಯ ವಸ್ತುಗಳು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಲಾಗಿದ್ದು, ಇದರಿಂದ ಈ ಉತ್ಪನ್ನಗಳ ಬೆಲೆ ಕಡಿಮೆಯಾಗಲಿದ್ದು, ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಗಣನೀಯವಾಗಿ ಉಳಿತಾಯವಾಗಲಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್ ಸಿ ನಾರಾಯಣ ರೆಂಜ ಅಭಿಪ್ರಾಯಿಸಿದ್ದಾರೆ.

ಜಿಎಸ್‌ಟಿ ಕೌನ್ಸಿಲ್‌ನ ಈ ಸಭೆಯಲ್ಲಿ, ತೆರಿಗೆ ಸ್ಲ್ಯಾಬ್‌ಗಳನ್ನು ಕೇವಲ 5% ಮತ್ತು 18%ಗೆ ಸೀಮಿತಗೊಳಿಸಲಾಗಿದ್ದು, 12% ಮತ್ತು 28% ಸ್ಲ್ಯಾಬ್‌ಗಳನ್ನು ರದ್ದುಗೊಳಿಸಲಾಗಿದೆ. ಈ ಸರಳೀಕರಣವು ಗ್ರಾಹಕರಿಗೆ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುವ ಜೊತೆಗೆ, ಉದ್ಯಮಿಗಳಿಗೆ ತೆರಿಗೆ ಸಂಗ್ರಹದ ಸಂಕೀರ್ಣತೆಯನ್ನು ತಗ್ಗಿಸಲಿದೆ.

ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಜಿಎಸ್‌ಟಿ ಸುಧಾರಣೆ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕೊಟ್ಟ ಮಾತನ್ನು ಈಡೇರಿಸಿದ್ದಾರೆ. ಈ ಐತಿಹಾಸಿಕ ಜಿಎಸ್‌ಟಿ ಸುಧಾರಣೆಗಳನ್ನು ತಂದ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆಂದು ಆರ್ ಸಿ ನಾರಾಯಣ ರೆಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here