ಪುತ್ತೂರು: ಮುಖ್ಯರಸ್ತೆಯಲ್ಲಿರುವ ಜಿಎಲ್ ಕಾಂಪ್ಲೆಕ್ಸ್ ಮುಂಭಾಗದ ಕಟ್ಟದಲ್ಲಿ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಮಿತ್ ಲೇಡಿಸ್ ಹರ್ಬಲ್ ಬ್ಯೂಟಿ ಪಾರ್ಲರ್ ಜಿಎಲ್ ಕಾಂಪ್ಲೆಕ್ಸ್ನ ನೆಲಮಹಡಿಗೆ ಸ್ಥಳಾಂತರಗೊಂಡು ಸೆ.4 ರಂದು ಶುಭಾರಂಭಗೊಂಡಿತು. ಜಿಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಅವರು ಪಾರ್ಲರನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಹಿಂದೆ ಪಾರ್ಲರ್ ಕೆಲವರಿಗಷ್ಟೇ ಸೀಮಿತ ಎಂಬಂತಿತ್ತು. ಆದರೆ ಈಗ ಎಲ್ಲರ ಅಗತ್ಯ ಸೇವೆಯಾಗಿ ಬೆಳೆದು ನಿಂತಿದೆ. ಕಳೆದ ಎರಡು ದಶಕಗಳಿಂದ ಈ ಪಾರ್ಲರ್ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಕಾರಣಾಂತರಗಳಿಂದ ಸ್ಥಳಾಂತರಗೊಂಡು ಶುಭಾರಂಭಗೊಂಡಿದೆ ಎಂದು ಹೇಳಿ ಶುಭಹಾರೈಸಿದರು.
ಪುರಸಭೆ ಮಾಜಿ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಜಿಎಲ್ ಕಾಂಪ್ಲೆಕ್ಸ್ ಪುತ್ತೂರಿನ ದೊಡ್ಡ ಕಟ್ಟಡಗಳಲ್ಲಿ ಒಂದಾಗಿದೆ. ಇಂತಹ ಕಟ್ಟಡಕ್ಕೆ ಅಮಿತ್ ಪಾರ್ಲರ್ ಸ್ಥಳಾಂತರಗೊಂಡಿದೆ. ಇದರಿಂದಾಗಿ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
ಗಣೇಶ್ ಪ್ರಸಾದ್ ಹೊಟೇಲ್ ಮಾಲಕ ಗೋಪಾಲಕೃಷ್ಣ ಹೇರಳೆ ಮಾತನಾಡಿ, ಪಾರ್ಲರ್ ಮಹಿಳೆಯರಿಗೆ ಅತ್ಯವಶ್ಯಕವಾಗಿದೆ. ಈ ಪಾರ್ಲರ್ನಲ್ಲಿ ಉತ್ತಮ ಸೌಕರ್ಯಗಳಿವೆ ಎಂದರು.
ತಾರುಣ್ಯ ಬ್ಯೂಟಿ ಪಾರ್ಲರ್ ಮಾಲಕಿ ನಿಶ್ಚಲ ಎಸ್ ಆಳ್ವ ಮಾತನಾಡಿ, ವಿದ್ಯಾರವರು ಈ ಉದ್ಯಮದಲ್ಲಿ ಕಠಿಣ ಪರಿಶ್ರಮ ಹಾಕಿ ಮುಂದೆ ಸಾಗುತ್ತಿದ್ದಾರೆ. ಅವರ ಈ ಉದ್ಯಮವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಹೇಳಿ ಶುಭಹಾರೈಸಿದರು. ಕವಿದಿನ್ ಮೆಲೋಡಿಸ್ನ ಕವಿತಾ ದಿನಾಕರ್ ಅವರು ಪ್ರಾರ್ಥಿಸಿದರು. ಅಮಿತ್ ಪಾರ್ಲರ್ ಮಾಲಕಿ ವಿದ್ಯಾ ಕೆ ಶೆಟ್ಟಿ ಅವರ ಪತಿ ರಾಜೇಶ್ ಶೆಟ್ಟಿ ವಂದಿಸಿದರು. ವಿದ್ಯಾ ಕೆ ಶೆಟ್ಟಿ, ಪುತ್ರ ವೀಶಾಲ್ ಆರ್ ಶೆಟ್ಟಿ ಹಾಗೂ ಪುತ್ರಿ ಶಾರ್ವರಿ ಆರ್ ಶೆಟ್ಟಿ ಅವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಸತ್ಕರಿಸಿದರು.
ಈ ವೇಳೆ ಕೊಲ್ಯಾಡಿಕಾರ್ಸ್ ಮಾಲಕ ರಾಮಚಂದ್ರ ನಾಯಕ್, ವಿಟ್ಲ ಪೊಲೀಸ್ ಠಾಣೆಯ ಎಎಸ್ಐ ಸೀತಾರಾಮ ಕೆ ಗೌಡ, ಪೆನ್ಸಿ ಇಂಟೀರಿಯಲ್ಸ್ ಮಾಲಕ ಸತೀಶ್ ರೈ ಕೈಕಾರ, ಪ್ರವೀಣ್ ಎಲೆಕ್ಟ್ರಿಕ್ ಮತ್ತು ಪ್ಲಂಬಿಂಗ್ನ ಪ್ರವೀಣ್ ಕುಂಬ್ರ, ಶುಭಾ ಬ್ಯೂಟಿ ಪಾರ್ಲರ್ ಮಾಲಕಿ ಶುಭಾ ರೈ, ಐಶ್ವರ್ಯ ಪಾರ್ಲರ್ ಮಾಲಕಿ ಐಶ್ವರ್ಯ ಚಂದ್ರಶೇಖರ್, ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಮೋಹನ್ ಕುಮಾರ್, ಫಿನೆಕ್ಸ್ ಯುನಿಸೆಕ್ಸ್ ಮಾಲಕಿ ದಿವ್ಯಾ ಕೆ ಶೆಟ್ಟಿ, ಸೇರಿದಂತೆ ಬಂಧು ಮಿತ್ರರು ಭಾಗಿಯಾಗಿದ್ದರು. ಅಮಿತ್ ಪಾರ್ಲರ್ ಸಿಬ್ಬಂದಿ ಮೀನಾ ಮತ್ತು ನಿಶಾ ಅವರು ಸಹಕರಿಸಿದರು.