ಪುತ್ತೂರು: ಅಗ್ರಾಳ ಪದ್ಮನಾಭ ರೈಯವರ ಪತ್ನಿ ಸರಸ್ವತಿ ಪದ್ಮನಾಭ ರೈ ಕುಂಬ್ರ( 85 ವ) ರವರು ಸೆ. 5 ರಂದು ಮುಂಜಾನೆ ಕುಂಬ್ರದ ತಮ್ಮ ಸಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪುತ್ರರಾದ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲ್ಲೂಕು ಸಮಿತಿ ಸಂಚಾಲಕ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಸಿವಿಲ್ ಇಂಜಿನಿಯರ್ ವಿನೋದ್ ಪ್ರಸಾದ್ ರೈ, ಪುತ್ರಿ ಭಾರತಿ ನಾರಾಯಣ ಆಳ್ವ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಇಂದು ಅಂತಿಮ ವಿಧಿ ವಿಧಾನ
ಮೃತರ ಅಂತಿಮ ವಿಧಿ ವಿಧಾನ ಇಂದು (5-9-2025) ಕುಂಬ್ರ ಮನೆಯಲ್ಲಿ ಬೆ.11.00 ಕ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.