ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಮಾದೇರಿ ಕಾರ್ಯಕ್ಷೇತ್ರದ ಭಾಗ್ಯಜ್ಯೋತಿ ಸಂಘದ ಸದಸ್ಯೆ ಲಕ್ಷ್ಮೀಯವರಿಗೆ ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ ಕಮಾಂಡ್ ವೀಲ್ ಚೆಯರ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸೆಬಾಸ್ಟಿಯನ್ ಪಿ.ಜೆ., ವಲಯ ಮೇಲ್ವಿಚಾರಕ ಆನಂದ ಡಿ.ಬಿ., ತರಬೇತಿ ಮೇಲ್ವಿಚಾರಕ ಶಿವಕುಮಾರ್, ಒಕ್ಕೂಟ ಪದಾಧಿಕಾರಿಗಳಾದ ಕಮಲಾಕ್ಷ ಗೌಡ, ದಯಾಮಣಿ, ಹರ್ಷಿತ, ಸೇವಾಪ್ರತಿನಿಧಿ ಸಂತೋಷ್ ಕೆ.ಎಂ. ಮತ್ತು ಲಕ್ಷ್ಮೀಯವರ ಮನೆಯವರು ಉಪಸ್ಥಿತರಿದ್ದರು.