ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಹಲವಾರು ವರ್ಷಗಳಿಂದ ಭಕ್ತಾದಿಗಳ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿರುವ ನವರಾತ್ರಿ ಉತ್ಸವ, ಚಂಡಿಕಾಹೋಮ, ಶಾರದಾ ವಿಗ್ರಹ ಪ್ರತಿಷ್ಠೆ, ಶಾರದೋತ್ಸವದ ಕುರಿತಂತೆ ಶಾರದೆ ವಿಗ್ರಹ ಮುಹೂರ್ತವು ಸೆ.6ರಂದು ಬೆಳಿಗ್ಗೆ ನಡೆಯಿತು.
ಆರಂಭದಲ್ಲಿ ಮಂದಿರದ ಪದಾಧಿಕಾರಿಗಳು ಮಹಾಲಿಂಗೇಶ್ವರ ದೇವಸ್ಥಾನ, ಶಾರದಾ ಭಜನಾ ಮಂದಿರದ ಸನಿಧಿಯಲ್ಲಿ ಪ್ರಾರ್ಥಿಸಿದರು. ಬಳಿಕ ಹಾರಾಡಿ ಹಿ.ಪ್ರಾ. ಶಾಲೆ ಬಳಿಯ ಶಿವಣ್ಣ ಪ್ರಭು (ಬಾಬುರಾಯ ಹೊಟೇಲ್)ರವರ ಮನೆಯ ಕಟ್ಟಡದಲ್ಲಿ ಪ್ರಭು ಸ್ಟುಡಿಯೋದ ಮಾಲಕ ಶ್ರೀನಿವಾಸ ಪ್ರಭುರವರು ವಿಗ್ರಹ ಮುಹೂರ್ತ ಪೂಜೆ ನೆರವೇರಿಸಿದರು.
ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ನವೀನ್ ಕುಲಾಲ್, ಜತೆ ಕಾರ್ಯದರ್ಶಿ ಸುಧೀರ್ ಕಲ್ಲಾರೆ, ಅಜಿತ್ ಹೊಸಮನೆ, ಕಿರಣ್ ಉರ್ಲಾಂಡಿ, ಯೋಗಾನಂದ ರಾವ್, ಗಣೇಶ್ ಬನ್ನೂರು, ಉದಯ್, ಗುಲಾಬಿ ಗೌಡ, ಗೋಪಾಲ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.