ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕಾರ್ಯಾಧ್ಯಕ್ಷರಾಗಿ ರಂಗನಾಥ್ ರಾವ್
ಪುತ್ತೂರು: ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯ ನೇತೃತ್ವದಲ್ಲಿ ಪುತ್ತೂರು ತಾಲೂಕನ್ನು ಕೇಂದ್ರವಾಗಿರಸಿಕೊಂಡು ಸಂಪ್ಯ ಶ್ರೀ ವಿಷ್ಣುಮೂರ್ತಿ ಅನ್ನಪೂಣೇಶ್ವರಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ 23ನೇ ವರ್ಷದ ಶ್ರೀ ಗಣಪತಿ, ಶಾರದೆ, ನವದುರ್ಗೆಯರ ಸಹಿತ ಪುತ್ತೂರು ದಸರಾ ಮಹೋತ್ಸವ ಸೆ.22 ರಿಂದ ಅ.4 ತನಕ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಸೆ.2ರಂದು ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಪುತ್ತೂರು ದಸರಾ ಮಹೋತ್ಸವ ಸಮಿತಿ ಸಂಚಾಲಕ ಕೆ.ಪ್ರೀತಂ ಪುತ್ತೂರಾಯ ಅವರು ಮಾತನಾಡಿ, ಈ ವರ್ಷವು ವಿಜೃಂಭಣೆಯಿಂದ ದಸರಾ ಮಹೋತ್ಸವ ನಡೆಯಲಿದೆ. ಎಲ್ಲರ ಸಹಕಾರ ಬೇಕೆಂದು ವಿನಂತಿಸಿದರು. ಇದೆ ಸಂದರ್ಭ 23ನೇ ಪುತ್ತೂರು ದಸರಾ ಮಹೋತ್ಸವ ಸಮಿತಿ ಪದಾಧಿಕಾರಿಗಳನ್ನು ಅವರು ಘೋಷಣೆ ಮಾಡಿದರು.
ಅಧ್ಯಕ್ಷರಾಗಿ ರಾಧಾಕೃಷ್ಣ ಬೋರ್ಕರ್, ಕಾರ್ಯಾಧ್ಯಕ್ಷರಾಗಿ ಟಿ ರಂಗನಾಥ್ ರಾವ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಮಡಿವಾಳ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಡಾ. ಸುರೇಶ್ ಪುತ್ತೂರಾಯ, ಗೌರವ ಸಲಹೆಗಾರರಾಗಿ ನ್ಯಾಯವಾದಿ ಮಹೇಶ್ ಕಜೆ, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಅವರನ್ನು ಆಯ್ಕೆ ಮಾಡಲಾಯಿತು. ಶೋಭಯಾತ್ರೆ ಸಮಿತಿ ಸಂಚಾಲಕರಾಗಿ ಜಯಂತ ನಡುಬೈಲು ಮತ್ತು ಸಹ ಸಂಚಾಲಕರಾಗಿ ರಾಜೇಶ್ ಬನ್ನೂರು ಮತ್ತು ಜಯಂತ ಶೆಟ್ಟಿ ಕಂಬಳತ್ತಡ್ಡ ಅವರನ್ನು ಆಯ್ಕೆ ಮಾಡಲಾಯಿತು. ಸಭಾ ವೇದಿಕೆಯಲ್ಲಿ ರಾಜೇಶ್ ಬನ್ನೂರು, ಟಿ.ರಂಗನಾಥ್ ರಾವ್, ಜಯಂತ ಶೆಟ್ಟಿ ಕಂಬಳತ್ತಡ್ಡ ಉಪಸ್ಥಿತರಿದ್ದರು.