ಪುತ್ತೂರು: ಸೆ.1ರಂದು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇಲ್ಲಿ ನಡೆದ ತಾಲೂಕು ಮಟ್ಟದಯೋಗ ಸ್ಪರ್ಧೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಇಲ್ಲಿಯ 9ನೇ ತರಗತಿಯ ಶ್ರಾವ್ಯ ವೀರಮಂಗಲ ವಿಜಯ ಗೌಡ ವಿ ಮತ್ತು ಹೇಮವತಿ ದಂಪತಿಗಳ ಪುತ್ರಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿರುತ್ತಾರೆ. ಇವರಿಗೆ ಯೋಗ ಗುರುಗಳಾದ ನವೀನ್ ಇವರು ತರಬೇತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ರವರು ಮಾರ್ಗದರ್ಶನ ನೀಡಿರುತ್ತಾರೆಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಗಾಯತ್ರಿ ಎಸ್ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
