ಅಪರಿಚಿತ ಯುವಕನ ಕೀಟಲೆ ಕೈಕಾಲು ಕಟ್ಟಿ ನಿಯಂತ್ರಣ

0

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣ ಪರಿಸರದಲ್ಲಿ ಕೀಟಲೆ ನೀಡುತ್ತಿದ್ದ ಅಪರಿಚಿತ ಯುವಕನೋರ್ವನನ್ನು ಕೈಕಾಲು ಕಟ್ಟಿ ನಿಯಂತ್ರಿಸಿದ ಘಟನೆ ಸೆ.6ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.


ಮಹಿಳಾ ಪ್ರಯಾಣಿಕರ ಸಹಿತ ಪರಿಸರದಲ್ಲಿ ಹಲವಾರು ಮಂದಿಗೆ ಕೀಟಲೆ ನೀಡುತ್ತಿದ್ದ ಈತನನ್ನು ಸ್ಥಳೀಯ ಯವಕರು ಬೆನ್ನಟ್ಟಿ ಹಿಡಿಯಲೆತ್ನಿಸಿದಾಗ ಈತ ಆಕ್ರಮಣಕಾರಿಯಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾನೆ . ಬೇರಾವ ದಾರಿ ಕಾಣದೇ ಹೋದಾಗ ಆತನ ಕೈ ಕಾಲು ಕಟ್ಟಿ ಆತನನ್ನು ನಿಯಂತ್ರಿಸಿದರು. ಸ್ಥಳೀಯ ಪೊಲೀಸರು 108 ಅಂಬುಲೆನ್ಸ್ ಮೂಲಕ ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಏನೊಂದೂ ಮಾತನಾಡದ ಆತನಿಂದ ಆತನ ವಿವರ ಸಂಗ್ರಹಿಸಲು ಅಸಾಧ್ಯವಾಗಿದೆ ಎಂದು ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವಿನಾಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here