ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ವರಮಹಾಲಕ್ಷ್ಮಿ ಸಮಿತಿ ವತಿಯಿಂದ ಸಹಾಯಧನ ವಿತರಣೆ

0

ಈಶ್ವರಮಂಗಲ : ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ವರಮಹಾಲಕ್ಷ್ಮಿ ಸಮಿತಿ ವತಿಯಿಂದ ವರ್ಷಂಪ್ರತಿ ಕೊಡ ಮಾಡುವ ಸಹಾಯಧನವನ್ನು ಈ ಬಾರಿ ಅನಾರೋಗ್ಯದಿಂದ ಬಳಲುತ್ತಿರುವ ಮೈರೋಳು ಕೆಳಗಿನಮನೆ ಶೀಲಾವತಿಯವರಿಗೆ ರೂ 10,000 ವನ್ನು ವೈದ್ಯಕೀಯ ವೆಚ್ಚಕ್ಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಗೌರವಾಧ್ಯಕ್ಷೆ ಸರೋಜಿನಿ ವಿ ನಾಗಪ್ಪಯ್ಯ, ಅಧ್ಯಕ್ಷೆ ರತಿ ರಮೇಶ್ ಪೂಜಾರಿ, ಕಾರ್ಯದರ್ಶಿ ಅರುಣಾ ಸತೀಶ್ ಶೆಟ್ಟಿ, ಖಜಾಂಜಿ ಮೋಹನಾಂಗಿ ಬಿಜಂತಡ್ಕ , ಗೌರವ ಸಲಹೆಗಾರರಾದ ರವಿಕಿರಣ್ ಶೆಟ್ಟಿ ಬೆದ್ರಾಡಿ, ಶ್ರೀರಾಮ ಮೇನಾಲ ಉಪಸ್ಥಿತರಿದ್ದರು ಹಾಗೂ ಸಮಿತಿಯ ಸದಸ್ಯರಾದ ಸುಭಾಷ್ ಚಂದ್ರ ರೈ ಮೈರೋಳು, ವಸಂತಿ ಪೆಟ್ರೋಡಿ , ಸೇವಂತಿ ಮಡ್ಯಲಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here