ಬೆಟ್ಟಂಪಾಡಿ :ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓಣಂ ಮತ್ತು ಶಿಕ್ಷಕರ ದಿನಾಚರಣೆಯನ್ನು ಸೆ.6ರಂದು ಆಚರಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ ಕೆ ಓಣಂ ಹಬ್ಬದ ಮಹತ್ವದ ಕುರಿತು ಮಾತನಾಡಿ, ಓಣಂ ಕುಟುಂಬದ ಐಕ್ಯತೆಯನ್ನು ಸಧೃಡಗೊಳಿಸುವುದಲ್ಲದೆ ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಸುತ್ತದೆ. ಬಲಿ ಚಕ್ರವರ್ತಿಯ ತ್ಯಾಗ ಮತ್ತು ಭಕ್ತಿ ನಮಗೆಲ್ಲರಿಗೂ ಸ್ಫೂರ್ತಿಯಾಗಬೇಕು ಎಂಬುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ದಾಮೋದರ ಕಣಜಾಲು ವಹಿಸಿ ಶಿಕ್ಷಕರ ದಿನದ ಮಹತ್ವವನ್ನು ತಿಳಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಪ್ರೊ. ಮಂಜುಳಾದೇವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಐ ಕ್ಯೂ ಎ ಸಿ ಸಂಚಾಲಕರ ಪ್ರೊ. ರಾಮಚಂದ್ರ ಡಿ ಶಿಕ್ಷಕರ ದಿನದ ಶುಭಾಶಯಗಳನ್ನಾಡಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ಸುಚಿತ, ಜತೆ ಕಾರ್ಯದರ್ಶಿ ಅಂಕಿತಾ ಮತ್ತು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ದೀಕ್ಷಿತಾ, ಜತೆ ಕಾರ್ಯದರ್ಶಿ ಕಾರ್ತಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಓಣಂ ಹಬ್ಬದ ಸಲುವಾಗಿ ವಿದ್ಯಾರ್ಥಿಗಳಿಗೆ ಪೂಕ್ಕಳಂ, ತಿರುವಾದಿರ ಕಳಿ, ಕೈಕೊಟ್ಟು ಕಳಿ, ಬಲೂನ್ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ, ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಜೇತರಿಗೆ ಪ್ರಾಂಶುಪಾಲರು ಬಹುಮಾನ ವಿತರಿಸಿದರು. ವಿದ್ಯಾರ್ಥಿ ಸಂಘದ ವತಿಯಿಂದ ಶುಚಿ ರುಚಿಯಾದ ‘ಓಣಂ ಸದ್ಯ’ದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಆಯೋಜಿಸಿದ ವಿದ್ಯಾರ್ಥಿಗಳಿಗೆ ಅಧ್ಯಾಪಕವೃಂದದ ವತಿಯಿಂದ ಗ್ರಂಥಪಾಲಕ ರಾಮ ಕೆ ರವರು ಅಭಿನಂದನೆ ವ್ಯಕ್ತಪಡಿಸಿ ಮುಂದಿನ ಶೈಕ್ಷಣಿಕ ಜೀವನ ಯಶಸ್ವಿಯಾಗಲು ಪುಸ್ತಕದ ಜತೆಗೆ ಗೆಳೆತನ ಬೆಳೆಸಿ ಎಂಬುದಾಗಿ ಶುಭಹಾರೈಸಿದರು. ಜಯಶ್ರೀ, ಧನ್ಯ ಮತ್ತು ಪ್ರತೀಕ್ಷಾ ಪ್ರಾರ್ಥಿಸಿದರು. ದೀಕ್ಷಿತಾ ಸ್ವಾಗತಿಸಿದರು. ನಮನ್ ಧನ್ಯವಾದ ಸಮರ್ಪಿಸಿದರು. ಸುಚಿತ ನಿರೂಪಿಸಿದರು.