ಪಡುಮಲೆ ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ  ಆಮಂತ್ರಣ ಪತ್ರ ಬಿಡುಗಡೆ

0

ಬಡಗನ್ನೂರು: ಪಡುಮಲೆ ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಮತ್ತು ವೇದಮೂರ್ತಿ ಕುಂಟಾರು ರವೀಶ ತಂತ್ರಿ ಇವರ ಮಾರ್ಗದರ್ಶನದಲ್ಲಿ ನಡೆಯುವ ಶ್ರೀ ಶರನ್ನವರಾತ್ರಿ ಮಹೋತ್ಸವವು ಸೆ.22 ರಿಂದ 30ರ ತನಕ 9 ದಿವಸಗಳ ಕಾಲ ನಡೆಯಲಿದ್ದು, ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೆ.7 ರಂದು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಪ್ರಾರಂಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರ ಸನ್ನಿಧಿಯಲ್ಲಿಟ್ಟು ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಬಿ ರವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೖೆಸಿದರು.

ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವಗಿರಿಮಸೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜನಾರ್ದನ ಪೂಜಾರಿ ಪದಡ್ಕ, ಉದಯ ಕುಮಾರ್ ಪಡುಮಲೆ, ಪುರಂದರ ರೖೆ ಕುದ್ಕಾಡಿ,  ಶ್ರೀನಿವಾಸ್ ಗೌಡ ಕನ್ನಯ, ಶಂಕರಿ ಪಟ್ಟೆ, ನವರಾತ್ರಿ ಉತ್ಸವ ಸಮಿತಿ ಕಾರ್ಯದರ್ಶಿ ಶೀಧರ ನೇರ್ಲಂಪ್ಪಾಡಿ,  ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ,  ಪಡುಮಲೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ, ಉಪಾಧ್ಯಕ್ಷ ರಾಜೇಶ್ ರೖೆ ಮೇಗಿನಮನೆ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ಬಡಗನ್ನೂರು ಗ್ರಾ.ಪಂ ಸದಸ್ಯ ಸಂತೋಷ ಆಳ್ವ ಗಿರಿಮನೆ, ವಿವಿಧ  ಸಮಿತಿ ಸದಸ್ಯರಾದ  ಸದಾಶಿವ ಭಟ್ ಪೖೆರುವುಣಿ, ರಾಮಕೃಷ್ಣ ಭಟ್ ಚಂದುಕೂಡ್ಲು, ತಿಮ್ಮಪ್ಪ ಪಾಟಾಳಿ ಮೃೆಂದನಡ್ಕ, ಸತೀಶ್ ಕುಲಾಲ್ ಪೖೆರುಪುಣಿ, ಗಿರೀಶ್ ಗೌಡ ಕನ್ನಯ, ರವಿರಾಜ ರೖೆ ಕೆ. ಪಿ, ಪುರಂದರ ರೖೆ ಸೇನರಮಜಲು, ನಾರಾಯಣ ಪಾಟಾಳಿ ಪಟ್ಟೆ,  ಪ್ರದೀಪ್ ಪಾಟಾಳಿ ಏರಾಜೆ, ಪ್ರಕಾಶ್ ಸಾಲಿಯಾನ್, ಶ್ರೀಧರ ರೖೆ ಹಲಸಿನಡಿ, ಸುಧಾಕರ ರೖೆ ಈಶಮೂಲೆ ಮತ್ತಿರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here