ಬಂಟ್ವಾಳ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ವಿಶ್ವವಿದ್ಯಾಲಯವು ಸವಿತ ಎಸ್ ರೈ ಅವರಿಗೆ ‘Determinants of Organisational Commitment: Is Ethical Leadership a Game-Changer? ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಪಿ.ಹೆಚ್.ಡಿ ಪದವಿ ನೀಡಿದೆ.
ಮಾಹೆ, ಮಣಿಪಾಲದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಎಂಐಎಂ), ಸಹ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ಕೂಡಮಾರ, ಅವರ ಮಾರ್ಗದರ್ಶನದಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ.
ಇವರು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈಯವರ ಪತ್ನಿ, ಶಂಕರ ಎನ್. ಶೆಟ್ಟಿ ತಾಳಿಪಾಡಿ ಮೂಡ್ರಗುತ್ತು ಹಾಗೂ ವಿಜಯ ಎಸ್. ಶೆಟ್ಟಿ ಬೇಳೂರು ದನ್ಯಾಡಿ ಮನೆ ದಂಪತಿಯವರ ಪುತ್ರಿ, ಬೈಲುಕೆಳಗಿನಮನೆ ದಿ. ಕೋಚಣ್ಣ ರೈ ಹಾಗೂ ಮಾಣಿಗುತ್ತು ಪ್ರಫುಲ್ಲ ಕೆ ರೈ ಅವರ ಸೊಸೆ.