ಚಿತ್ರ: ಅರವಿಂದ ಕುಡ್ಲ
ಅಪರೂಪದ ರಕ್ತ ಚಂದ್ರಗ್ರಹಣಕ್ಕೆ ಭಾರತ ಸಹಿತ ವಿವಿಧ ದೇಶಗಳು ರವಿವಾರ ಸಾಕ್ಷಿಯಾದವು. ರಾತ್ರಿ 9.57ಕ್ಕೆ ಆರಂಭವಾದ ಗ್ರಹಣವು ನಸುಕಿನ 2.25ರವರೆಗೂ ಮುಂದುವರಿಯಿತು. ರಾತ್ರಿ 11ರಿಂದ 12.22ರವರೆಗೆ ಕೆಂಬಣ್ಣಕ್ಕೆ ತಿರುಗಿದ ಚಂದಿರ, ಭಾರತ ಸಹಿತ ಅನೇಕ ದೇಶಗಳಲ್ಲಿ ಖಗೋಳ ಪ್ರೇಮಿಗಳಿಗೆ ರಸದೌತಣ ಬಡಿಸಿದನು.
ರಾತ್ರಿ 9.56ಕ್ಕೆ ಗ್ರಹಣದ ಸ್ಪರ್ಶಕಾಲ ಆರಂಭವಾಗಿ ಮಧ್ಯರಾತ್ರಿ 1.26ಕ್ಕೆ ಚಂದ್ರನಿಗೆ ಗ್ರಹಣ ಮೋಕ್ಷವಾಯಿತು. ಆರಂಭದಿಂದ ಹಂತಹಂತವಾಗಿ ಚಂದ್ರನನ್ನು ಆವರಿಸಿಕೊಳ್ಳುತ್ತಾ ಭೂಮಿಯ ನೆರಳು ಸಾಗಿತ್ತು. ಸರಿಯಾಗಿ 11 ಗಂಟೆ 21 ನಿಮಿಷಕ್ಕೆ ಚಂದ್ರನನ್ನು ಅರ್ಧಭಾಗ ಆವರಿಸಿಕೊಂಡಿತು. ಆ ಬಳಿಕ ಸರಿಯಾಗಿ 11 ಗಂಟೆ 42 ನಿಮಿಷಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿತು. ರಾತ್ರಿ 11.42ರ ವೇಳೆಗೆ ಸಂಪೂರ್ಣ ಗಾಢಕೆಂಪು ಬಣ್ಣಕ್ಕೆ ಚಂದಿರ ತಿರುಗಿದನು. ಈ ಮೂಲಕ ಸಂಪೂರ್ಣ ಚಂದ್ರಗ್ರಹಣ ಗೋಚರಿಸಿತು. ಬಹುತೇಕ ಜಿಲ್ಲೆಗಳಲ್ಲಿ ರಕ್ತಚಂದಿರನನ್ನು ಜನ ಕಣ್ತುಂಬಿಕೊಂಡರು.