ಪುತ್ತೂರು: ಸೆಪ್ಟೆಂಬರ್ 5 ರಿಂದ 7 ರ ವರೆಗೆ ಮೈಸೂರು ಗೋಪಾಲಸ್ವಾಮಿ ಶಿಶು ವಿಹಾರದಲ್ಲಿ ನಡೆದ ವಿದ್ಯಾಭಾರತಿ ಪ್ರಾಂತ ಮಟ್ಟದ ಜ್ಞಾನ ವಿಜ್ಞಾನ ಮತ್ತು ಸಂಸ್ಕೃತಿ ಜ್ಞಾನ ಸ್ಪರ್ಧೆಯಲ್ಲಿ ಬೆಟ್ಟಂಪಾಡಿ ವಿದ್ಯಾಗಿರಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಅಭಿನವರಾಜ್ ಕಥಾಕಥನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, 8ನೇ ತರಗತಿಯ ಪಿ ಯಂ ಹೃಷಿಕೇಶ್ ಸೆನ್ಸಾರ್ ಆಧಾರಿತ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ , 10ನೇ ತರಗತಿಯ ಸಿಂಚನ ಯಸ್ ಯನ್ ಆಹಾರ ಸಂಸ್ಕರಣೆ ವಿಷಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಪ್ರಥಮ ಸ್ಥಾನ ಪಡೆದ ಅಭಿನವರಾಜ್ ಮತ್ತು ಹೃಷಿಕೇಶ್ ಸೆಪ್ಟಂಬರ್ 18ರಿಂದ 20 ರ ವರೆಗೆ ತೆಲಂಗಾಣದಲ್ಲಿ ನಡೆಯಲಿರುವ ಕ್ಷೇತ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.