ಬಾಲಕರ ವಿಭಾಗದಲ್ಲಿ ದುರ್ಗಾಂಬಾ ಪ. ಪೂ. ಕಾಲೇಜು ಆಲಂಕಾರು,ಬಾಲಕಿಯರ ವಿಭಾಗದಲ್ಲಿ ಸಂತ ಜಾರ್ಜ್ ಪ.ಫೂ ಕಾಲೇಜು ನೆಲ್ಯಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಆಲಂಕಾರು:ಕಡಬ ತಾಲ್ಲೂಕು ಪದವಿ ಪೂರ್ವ ವಿಭಾಗದ ಬಾಲಕ,ಬಾಲಕಿಯರ ಮ್ಯಾಟ್ ಕಬಡಿ ಪಂದ್ಯಾಟ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ ಭಟ್ ಉಪ್ಪಂಗಳ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯೊಬ್ಬ ಪ್ರಗತಿ ಹೊಂದಬೇಕಾದರೆ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಸದೃಢವಾಗಿರಬೇಕು. ಕ್ರೀಡೆಯಲ್ಲಿ ತೊಡಗಿಕೊಂಡಾಗ ಅದು ಸಾಧ್ಯ. ಸೋಲು ಮತ್ತು ಗೆಲುವು ಕಲಿಸುವ ಪಾಠಗಳು ಅನನ್ಯವಾದುದು. ಕ್ರೀಡೆ ಕಲಿಸುವ ಸ್ಫೂರ್ತಿಯು ನಮ್ಮ ಬದುಕಿಗೂ ಸ್ಫೂರ್ತಿ ಯಾಗಲಿ ಎಂದು ತಿಳಿಸಿ ಕ್ರೀಡಾಕೂಟಕ್ಕೆ ಶುಭಾಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಯವರು ಮಾತನಾಡಿ, ಕಬಡ್ಡಿ ಉತ್ತಮ ಕ್ರೀಡೆಯಾಗಿದ್ದು, ಪ್ರೋ ಕಬಡ್ಡಿಯ ನಂತರ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚು ಹೆಚ್ಚು ಅವಕಾಶಗಳು ದೊರೆಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಾಹಾರೈಸಿದರು.
ಸಭಾಧ್ಯಕ್ಷತೆಯನ್ನು ಆಲಂಕಾರು ದುರ್ಗಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಮಾತನಾಡಿ ,ಆಲಂಕಾರಿನಲ್ಲಿ ಪ್ರಪ್ರಥಮ ಬಾರಿಗೆ ಪಿ.ಯು.ಸಿ ವಿಭಾಗ ಮ್ಯಾಟ್ ಕಬಡ್ಡಿ ಪಂದ್ಯಾಟದ ಅತಿಥ್ಯ ಸಿಕ್ಕಿರುವುದು ಸಂತಸದ ವಿಚಾರವಾಗಿದ್ದು ಎಲ್ಲರು ಸಹಕರಿಸುವಂತೆ ವಿನಂತಿಸಿ, ಕಬಡ್ಡಿ ಪಂದ್ಯಾಟದ ಮಹತ್ವ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಜಯಪ್ರಕಾಶ್ ರೈ ಪಟ್ಟೆಗುತ್ತು, ಆಡಳಿತ ಮಂಡಳಿಯ ನಿರ್ದೇಶಕರಾದ ಸರೋಜಾ ಉಮೇಶ್ ರೈ ಮನವಳಿಕೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಕೊಂಡಾಡಿ ದ. ಕ. ಜಿಲ್ಲಾ ಪ. ಪೂ. ದೈ. ಶಿ. ಉ. ಸಂಘದ ಅಧ್ಯಕ್ಷರಾದ ರಾಧಾಕೃಷ್ಣ, ರಾಷ್ಟ್ರ ಮಟ್ಟದ ತರಬೇತುದಾರರಾದ ಶಿವರಾಮ ಏನೆಕಲ್ಲು, ಆಡಳಿತ ಮಂಡಳಿಯ ನಿರ್ದೇಶಕರುಗಳಾದ ರಾಮರಾಜ್ ನಗ್ರಿ, ತಾರಾನಾಥ ರೈ ನಗ್ರಿ, ಮುತ್ತಪ್ಪ ಪೂಜಾರಿ ನೈಯಲ್ಗ, ಹೇಮಂತ ರೈ ಮನವಳಿಕೆಗುತ್ತು, ವಿಜಯಕುಮಾರ್ ರೈ ಮನವಳಿಕೆಗುತ್ತು, ದಯಾನಂದ ಗೌಡ ಆಲಡ್ಕ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಗೌಡ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀನಾಥ ಗೌಡ ಕೇವಳ,ಆಡಳಿತಾಧಿಕಾರಿ ಶ್ರೀಪತಿ ರಾವ್ ಹೆಚ್., ಮುಖ್ಯಗುರುಗಳಾದ ನವೀನ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ರೂಪಾ ಎಂ. ಟಿ ಸ್ವಾಗತಿಸಿ, ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೇಯಸ್ಸು ರೈ ಧನ್ಯವಾದ ಸಮರ್ಪಿಸಿ, ಶಿಕ್ಷಕರಾದ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ನಿತ್ಯಾ, ತಸ್ಲೀಮಾ, ಪೂಜಾ, ಪರ್ಹನ, ಕೃತಿಕಾ, ವಿಜೇತಾ ಪ್ರಾರ್ಥಿಸಿದರು.
ಸಂಜೆ ಸಮಾರೋಪ ಸಮಾರಂಭ ನಡೆಯಿತು. ಸಭಾಧ್ಯಕ್ಷತೆಯನ್ನು ದುರ್ಗಾಂಬಾ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಈಶ್ವರ ಗೌಡ ಪಜ್ಜಡ್ಕ ವಹಿಸಿದರು. ಮುಖ್ಯ ಅತಿಥಿಗಳಾಗಿ ಆಲಂಕಾರು ದುರ್ಗಾಟವರ ್ಸ ನ ಮಾಲಕರಾದ ರಾಧಾಕೃಷ್ಣ ರೈ ಪರಾರಿಗುತ್ತು ಗುತ್ತು, ವರ್ತಕರಾದ ರವಳನಾಥ ಪ್ರಭು, ಶರವೂರು ದೇವಳದ ಜೀರ್ಣೋದ್ದಾರ ಸಮಿತಿ ಸದಸ್ಯ ಗಣೇಶ್ ಹಿರಿಂಜ,ಶಿಕ್ಷಕಿ ಅಕ್ಷತಾ ನಾಡ್ತಿಲ, ತಾಜ್ ಹೋಟೆಲ್ ಮಾಲಕರಾದ ಇರ್ಷಾದ್, ಅನುದಾನಿತ ಪ. ಪೂ. ಕಾಲೇಜು. ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಸೋಮಶೇಖರ್, ಆಲಂಕಾರು ಸಿ. ಎ. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್.ಡಿ ರವರು ಉಪಸ್ಥಿತರಿದ್ದರು.ಇದೇ ಸಂಧರ್ಭದಲ್ಲಿ ಪಂದ್ಯಾಟದ ಯಶಸ್ವಿಗಾಗಿ ದುಡಿದ ಶ್ರೇಯಸ್ಸು ರೈ ಯವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಮುಖ್ಯಗುರುಗಳಾದ ನವೀನ ಕುಮಾರ್ ಸ್ವಾಗತಿಸಿ, ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೇಯಸ್ಸು ರೈ ಧನ್ಯವಾದ ಸಮರ್ಪಿಸಿ, ಶಿಕ್ಷಕರಾದ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಾಲಕರ ವಿಭಾಗದಲ್ಲಿ
ಪ್ರಥಮ ಶ್ರೀ ದುರ್ಗಂಬಾ ಪ. ಪೂ. ಕಾಲೇಜು ಆಲಂಕಾರು, ದ್ವಿತೀಯ ಕೆ. ಎಸ್. ಎಸ್. ಪ. ಪೂ. ಕಾಲೇಜು ಸುಬ್ರಹ್ಮಣ್ಯ,ವೈಯಕ್ತಿಕ ಪ್ರಶಸ್ತಿ, ಉತ್ತಮ ದಾಳಿಗಾರ ದೀಕ್ಷಿತ್ ಕೆ. ಎಸ್. ಎಸ್. ಪ. ಪೂ ಕಾಲೇಜು ಸುಬ್ರಹ್ಮಣ್ಯ,ಉತ್ತಮ ಹಿಡಿತಗಾರ ಪ್ರೀತಮ್ ಶ್ರೀ ದುರ್ಗಂಬಾ ಪ. ಪೂ. ಕಾಲೇಜು ಅಲಂಕಾರು, ಸವ್ಯಸಾಚಿ ಆಟಗಾರ ಕಿಶನ್ ಶ್ರೀ ದುರ್ಗಂಬಾ ಪ. ಪೂ. ಕಾಲೇಜು ಆಲಂಕಾರು
ಬಾಲಕಿಯರ ವಿಭಾಗದಲ್ಲಿ
ಪ್ರಥಮ ಸಂತ ಜಾರ್ಜ್ ಪ. ಪೂ. ಕಾಲೇಜು ನೆಲ್ಯಾಡಿ , ದ್ವಿತೀಯ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜ
ವೈಯಕ್ತಿಕ
ಉತ್ತಮ ದಾಳಿಗಾರ್ತಿ , ಚರಿತ, ಎಸ್. ಆರ್. ಪ. ಪೂ. ಕಾಲೇಜು ರಾಮಕುಂಜ,ಉತ್ತಮ ಹಿಡಿತಗಾರ್ತಿ ಕವನಶ್ರೀ ಸಂತ ಜಾರ್ಜ್ ಪ. ಪೂ. ಕಾಲೇಜು
ಸವ್ಯಸಾಚಿ ಆಟಗಾರ್ತಿ :
ರಶ್ಮಿತಾ, ಸಂತ ಜಾರ್ಜ್ ಪ. ಪೂ. ಕಾಲೇಜು ರವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಕಡಬ,ಪುತ್ತೂರು ತಾಲ್ಲೂಕಿನ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರುಗಳು,ವಿದ್ಯಾರ್ಥಿನಿಯರು,ಭೋದಕ,ಭೋದಕೇತರ ವರ್ಗದವರು ಕಾರ್ಯಕ್ರಮದಲ್ಲಿ ಸಹಕರಿಸಿದರು.