ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಆರ್.ಸಿ ನಾರಾಯಣರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ 2024-25ನೇ ಸಾಲಿನ ವರದಿಯನ್ನು ಸಂಘದ ನಿರ್ದೇಶಕ ನಾರಾಯಣ ಪೂಜಾರಿ.ಕೆ ವಾಚಿಸಿದರು. 2024-25ನೇ ಸಾಲಿನ ಲೆಕ್ಕಪರಿಶೋಧನ ಲೆಕ್ಕ ಪತ್ರವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್.ಕೆರವರು ಮಂಡಿಸಿದರು.2024-25ನೇ ಸಾಲಿನಲ್ಲಿ 32,23,94,940 ವ್ಯವಹಾರ ನಡೆಸಲಾಗಿದ್ದು, ನಿರಂತರ ಲಾಭವನ್ನು ಪಡೆದು ಆಡಿಟ್ ವರದಿಯಲ್ಲಿ ‘ಎ’ ತರಗತಿಯನ್ನು ಪಡೆದಿರುತ್ತದೆ.ಅಧ್ಯಕ್ಷರು ಸದಸ್ಯರಿಗೆ 8.5% ಡಿವಿಡೆಂಟ್ ಎಂದು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮೂರ್ತೆದಾರರಾದ ಶಿವರಾಮ ಪೂಜಾರಿ ಕೆರೆಮಾರು ಮಾಡ್ನೂರು ಗ್ರಾಮ ಕಾವು ಅಂಚೆ ಇವರಿಗೆ ಸನ್ಮಾನ ಮಾಡಲಾಯಿತು. ಮೂರ್ತೆದಾರರ ಮಕ್ಕಳಿಗೆ 31,000/- ರೂಪಾಯಿ ವಿದ್ಯಾರ್ಥಿ ಪ್ರೋತ್ಸಾಹಧನ ನೀಡಲಾಯಿತು. ಅಧ್ಯಕ್ಷರು ಮಾತನಾಡುತ್ತ ಸಂಘದ ಎಲ್ಲಾ ಸದಸ್ಯರು ತಮ್ಮ ಬ್ಯಾಂಕಿನಲ್ಲಿ ವ್ಯವಹಾರವನ್ನು ಮಾಡುವುದರ ಮೂಲಕ ಸಂಘದ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಹಾಗೂ ಎಲ್ಲಾ ಠೇವಣಿದಾರರಿಗೆ ಹಾಗೂ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು.
ಉಪಾಧ್ಯಕ್ಷರಾದ ಧನಂಜಯ ಪೂಜಾರಿ ಪಟ್ಲ ಸನ್ಮಾನ ಪತ್ರವನ್ನು ಓದಿದರು. ನಿರ್ದೇಶಕ ವಸಂತ ಪೂಜಾರಿ ಬಂಬಿಲ ಮೃತಪಟ್ಟ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ,ಮೂರ್ತೆದಾರರ ಸದಸ್ಯರಿಗೆ ಮತ್ತು ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಿದರು.ಮಹಾಸಭೆಯ ತಿಳುವಳಿಕೆ ಪತ್ರವನ್ನು ನಿರ್ದೇಶಕರಾದ ತ್ರಿವೇಣಿ .ಕೆ ಮತ್ತು ಅಂದಾಜು ಬಜೆಟನ್ನು ಸುಷ್ಮಾ ಕುಮಾರಿ ವಾಚಿಸಿದರು.ವೇದಿಕೆಯಲ್ಲಿ ನಿರ್ದೇಶಕರಾದ ವಿಜಯ ಪೂಜಾರಿ ಆನಡ್ಕ, ರಾಮಣ್ಣ ಪೂಜಾರಿ ಕರ್ನೂರು ಇವರು ಉಪಸಿತ್ಥರಿದ್ದರು.
ಸ್ಮೃತಿ ಪಲ್ಲತ್ತಾರು ಪ್ರಾರ್ಥಿಸಿದರು ನಿಕಟಪೂರ್ವ ಅಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ ಸ್ವಾಗತಿಸಿದರು.ಸತೀಶ್ ಕೋಡಿಬೈಲು ವಂದಿಸಿದರು. ವಿದ್ಯಾರ್ಥಿ ವೇತನದ ಪಟ್ಟಿಯನ್ನು ಸಿಬ್ಬಂದಿ ಪ್ರಮೀತ.ಎಸ್ ವಾಚಿಸಿದರು. ಸಿಬ್ಬಂದಿ ಶೃತಿ ಕೆ, ಪಿಗ್ಮಿ ಸಂಗ್ರಾಹಕ ಸುದೇಂದ್ರನ್.ಪಿ ಸಹಕರಿಸಿದರು.