ಅಕ್ಷರ ದೀಪ ಬೆಳಗಿದ ಶಿಕ್ಷಕರನ್ನು ಮರೆಯದಿರೋಣ -ರವಿರಾಜ ರೈ
ಸಜಂಕಾಡಿ ಸಾಧಕ ಶಿಕ್ಷಕರನ್ನು ರಾಜ್ಯಕ್ಕೆ ಪರಿಚಯಿಸಿದ ಪುಣ್ಯ ನೆಲ-ಪ್ರಶಾಂತ್ ಪಿ.ಎಲ್
ಪುತ್ತೂರು: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ “ಗುರುನಮನ ” ಕಾರ್ಯಕ್ರಮ ನಡೆಯಿತು.ಇದೇ ಶಾಲೆಯಲ್ಲಿ ತಮ್ಮ ಪ್ರಥಮ ಸರಕಾರಿ ಸೇವೆ ಆರಂಭಿಸಿ ಸುಮಾರು ಐದು ವರುಷಗಳ ಕಾಲ ಸೇವೆ ಸಲ್ಲಿಸಿ ಪ್ರಸ್ತುತ ಸ.ಪ.ಪೂ ಕಾಲೇಜು ಕೊಂಬೆಟ್ಟು ಇಲ್ಲಿ ಆಂಗ್ಲಭಾಷಾ ಶಿಕ್ಷಕ ಪ್ರಶಾಂತ್ ಪಿ.ಎಲ್ ರವರನ್ನು ಅಭಿನಂದಿಸಲಾಯಿತು.

ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯ ರವಿರಾಜ ರೈ ಸಜಂಕಾಡಿ “ಅಕ್ಷರದ ದೀಪ ಬೆಳಗಿದ ಮತ್ತು ದಾರಿ ತೋರಿದ ಗುರುವನ್ನು ನಾವೆಂದಿಗೂ ಮರೆಯದಿರೋಣ ಎಂದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಶಾಂತ್ ಪಿ.ಎಲ್ ರವರು ಸಜಂಕಾಡಿ ಮಣ್ಣಿಗೆ ಅದ್ಭುತ ಶಕ್ತಿ ಇದೆ .ಈ ನೆಲ ಸಾಧಕ ಶಿಕ್ಷಕ ರನ್ನು ನಿರ್ಮಾಣ ಮಾಡಿದೆ ಎಂದರು . ಎಸ್ .ಡಿ.ಎಂ.ಸಿ.ಆಧ್ಯಕ್ಷೆ ಯಶೋಧ ಅಧ್ಯಕ್ಷತೆ ವಹಿಸಿದ್ದರು .ವೇದಿಕೆಯಲ್ಲಿ ಉಪಾಧ್ಯಕ್ಷ ಇಬ್ರಾಹಿಂ ಕೆ ಉಪಸ್ಥಿತರಿದ್ದರು .ಶಾಲಾ ಪ್ರಭಾರ ಮುಖ್ಯಗುರು ಸುಮಲತ ಪಿ.ಕೆ ಸ್ವಾಗತಿಸಿ ,ಅತಿಥಿ ಶಿಕ್ಷಕಿ ಆಯಿಷತ್ ಮಿಸ್ರಿಯಾ ವಂದಿಸಿದರು . ಶಿಕ್ಷಕ ಗಣೇಶ ನಾಯಕ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು .