ಗೌರವಾಧ್ಯಕ್ಷರಾಗಿ ಬೇಬಿಜಾನ್, ಅಧ್ಯಕ್ಷರಾಗಿ ಸತೀಶ್ ಪುರುಷರಕಟ್ಟೆ, ಪ್ರ.ಕಾರ್ಯದರ್ಶಿ ಶಿಹಾಬ್ ಪಿ.ಕೆ
ಪುತ್ತೂರು: ಟೈ ಬ್ರೇಕರ್ಸ್ ಯುವಕ ವೃಂದ ಪುರುಷರಕಟ್ಟೆ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸತೀಶ್ ಪುರುಷರಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿಹಾಬ್ ಪಿ.ಕೆ ಆಯ್ಕೆಯಾಗಿದ್ದಾರೆ.
ಸಭೆ ರವೀಂದ್ರ ರೈ ನೆಕ್ಕಿಲು ಅಧ್ಯಕ್ಷತೆಯಲ್ಲಿ ಪುರುಷರಕಟ್ಟೆಯ ಬಾಲಯ ಕಾಂಪ್ಲೆಕ್ಸ್ನಲ್ಲಿ ನಡೆಯಿತು.ಗೌರವಾಧ್ಯಕ್ಷರಾಗಿ ಬೇಬಿ ಜಾನ್ ಕೂಡುರಸ್ತೆ, ಖಾಯಂ ಆಹ್ವಾನಿತರಾಗಿ ಬಿ.ಕೆ ಶ್ರೀನಿವಾಸ್ ರಾವ್, ವಿಶ್ವನಾಥ್ ಬಿಂದು, ಗಣೇಶ್ ಮಾಯಂಗಳ, ಸುಬ್ರಹ್ಮಣ್ಯ ಪೂಜಾರಿ, ರಫೀಕ್ ಪಿ.ಕೆ, ಲತೀಫ್ ಕಾಳಿಂಗಹಿತ್ಲು, ಎನ್ ಅಬ್ಬಾಸ್ ಎಂ.ಜಿ, ಹಾಗೂ ರವೀಂದ್ರ ರೈ ನೆಕ್ಕಿಲು ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ದಿನೇಶ್ ಯು.ಬಿ, ಶಹನ್ ಝೂಮ್, ಕಾರ್ಯದರ್ಶಿಯಾಗಿ ಶರೀಫ್ ಇಂದಿರಾನಗರ, ಕೋಶಾಧಿಕಾರಿಯಾಗಿ ಝುಬೈರ್ ಪಿ.ಕೆ, ಸಂಘಟನಾ ಕಾರ್ಯದರ್ಶಿ ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿಯಾಗಿ ಜಮಾಲ್ ಎಂ.ಜಿ, ಕ್ರೀಡಾ ಕಾರ್ಯದರ್ಶಿಯಾಗಿ ಸಮದ್ ಎಂ.ಜಿ ಹಾಗೂ ರಾಝ್ ಪಿ.ಕೆ ಅವರನ್ನು ಆಯ್ಕೆ ಮಾಡಲಾಯಿತು.