ಪುತ್ತೂರು: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸಂತ ಫಿಲೋಮಿನಾ ಪ್ರೌಢಶಾಲೆ, ದರ್ಬೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಸೆ. 6ರಂದು ನಡೆದ ತಾಲೂಕು ಮಟ್ಟದ 14 ವರ್ಷ ಹಾಗೂ 17 ವರ್ಷ ವಯೋಮಾನದ ಬಾಲಕರ ಫುಟ್ಬಾಲ್ ಪಂದ್ಯಾಟದಲ್ಲಿ ದರ್ಬೆ ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ತಂಡಗಳು ಉತ್ತಮ ಪ್ರದರ್ಶನ ನೀಡಿದೆ.
17 ವರ್ಷ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರೆ, 14 ವರ್ಷ ವಯೋಮಾನದ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಪ್ರವೇಶಿಸಿದೆ.
ಈ ಸಾಧನೆಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಹರೀಶ್, ಶ್ರೀ ನಿರಂಜನ್ ಮತ್ತು ಶ್ರೀ ಅಕ್ಷಯ್ ಅವರ ತರಬೇತಿ ನೀಡಿರುತ್ತಾರೆ.