ಮುಕ್ಕೂರು‌: 16 ನೇ ವರ್ಷದ ಗಣೇಶೋತ್ಸವ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ

0

ಪುತ್ತೂರು ‌: ಸವಣೂರು ಸಮೀಪದ ಕುಂಡಡ್ಕ -ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಆ.27 ರಂದು ನಡೆದ 16 ನೇ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಸೆ.8 ರಂದು ನಡೆಯಿತು.

ಶಾಲೆಗಳಿಗೆ ತೆರಳಿ ಬಹುಮಾನ ವಿತರಣೆ
ಐವರ್ನಾಡು ಸ‌.ಹಿ.ಪ್ರಾ.ಶಾಲೆ, ಬೆಳ್ಳಾರೆ ಕೆಪಿಎಸ್, ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ, ಚೆನ್ನಾವರ ಕಿ.ಪ್ರಾ.ಶಾಲೆ, ಮಣಿಕ್ಕರ ಸ.ಪ್ರೌಢಶಾಲೆ, ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆ, ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಮುಕ್ಕೂರು ಸ.ಹಿ.ಪ್ರಾ.ಶಾಲೆ, ಮುಕ್ಕೂರು ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳು ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಜೇತರಿಗೆ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಶಸ್ತಿ, ಪ್ರಮಾಣ ಪತ್ರವನ್ನು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಆಯಾ ಶಾಲೆಯ ಶಿಕ್ಷಕರ ಸಮ್ಮುಖದಲ್ಲಿ ವಿತರಿಸಿದರು.

ಬಹುಮಾನ ವಿತರಿಸಿ ಮಾತನಾಡಿದ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಚಿತ್ರಕಲೆ ವಿದ್ಯಾರ್ಥಿಗಳ ಪ್ರತಿಭೆ ತೋರ್ಪಡಿಸಲು ಪೂರಕ ಚಟುವಟಿಕೆಯಾಗಿದ್ದು ಮುಕ್ಕೂರು ಗಣೇಶೋತ್ಸವ ಅದಕ್ಕೂಂದು ವೇದಿಕೆ ಕಲ್ಪಿಸಿತು. ಸುಳ್ಯ, ಪುತ್ತೂರು ತಾಲೂಕಿನ ಸುಮಾರು 50 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೊಂದು ಮಕ್ಕಳ ಬೌದ್ಧಿಕ ವಿಕಸನಕ್ಕೂ ಉತ್ತಮ ಅವಕಾಶ ಕಲ್ಪಿಸಿದೆ‌ ಎಂದರು.

ವಿಜೇತರು, ಭಾಗವಹಿಸಿದವರನ್ನು ಅವರು ಕಲಿಯುತ್ತಿರುವ ಶಾಲೆಗಳಲ್ಲಿಯೇ ಅಭಿನಂದಿಸಿ ಉಳಿದ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಕಾರ್ಯಕ್ಕೆ ಗಣೇಶೋತ್ಸವ ಸಮಿತಿ ಯೋಚಿಸಿ ಅದನ್ನು ಅನುಷ್ಠಾನಿಸಿದೆ.‌ ಆಯಾ ಶಾಲೆಯವರ ಸ್ಪಂದನೆಯು ಉತ್ತಮವಾಗಿತ್ತು ಎಂದು ಜಗನ್ನಾಥ ಪೂಜಾರಿ ಹೇಳಿದರು.

ಅಂಗನವಾಡಿ, 1 ನೇ ತರಗತಿಯಿಂದ‌ 3 ನೇ ತರಗತಿ‌ ವಿಭಾಗಕ್ಕೆ ಐಚ್ಛಿಕ, 4 ರಿಂದ 7 ನೇ ತರಗತಿ ವಿಭಾಗಕ್ಕೆ- ಐಚ್ಛಿಕ, 8 ರಿಂದ 10 ನೇ ತರಗತಿ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಸಲಾಗಿತ್ತು. ನಾಲ್ಕು ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತಲಾ ಇಬ್ಬರು ಮೆಚ್ಚುಗೆ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಯಾರೆಲ್ಲ ವಿಜೇತರು
ಅಂಗನವಾಡಿ ವಿಭಾಗದಲ್ಲಿ ಮುಕ್ಕೂರು ಅಂಗನವಾಡಿ ಕೇಂದ್ರದಲ್ಲಿ ಪ್ರಥಮ ಸ್ಥಾನ ಪಡೆದ ಪ್ರಾಪ್ತಿ, ದ್ವಿತೀಯ ಸ್ಥಾನ ಪಡೆದ ಅಶ್ವಿತ, ಮೆಚ್ಚುಗೆ ಪಡೆದ ಮನಿಷ್, ಡಿಂಪನ, 1 ರಿಂದ 3 ನೇ ತರಗತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಐವರ್ನಾಡು ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ ವಿಶಾನಿ ಎ ಕಾನಾವು ಕಜೆ, ದ್ವಿತೀಯ ಸ್ಥಾನ ಪಡೆದ ಮುಕ್ಕೂರು ಸ.ಹಿ.ಪ್ರಾ.ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ರಿಧಿ, ಮೆಚ್ಚುಗೆ ಪಡೆದ ಮುಕ್ಕೂರು ಸ.ಹಿ.ಪ್ರಾ.ಶಾಲೆಯ 1 ನೇ ತರಗತಿಯ ಬಿವಿನ್ ಕೆ, 2 ನೇ ತರಗತಿಯ ದಿತಾ, 4 ರಿಂದ 7 ನೇ ತರಗತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬೆಳ್ಳಾರೆ ಕೆಪಿಎಸ್ ನ 7 ನೇ ತರಗತಿಯ ಕೃತಾರ್ಥ್ ಪಿ.ವಿ., ದ್ವಿತೀಯ ಸ್ಥಾನ ಪಡೆದ ಚೆನ್ನಾವರ ಸ.ಕಿ.ಪ್ರಾ.ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಚಿಂತನ್ ಎಸ್ ವಿ., ಮೆಚ್ಚುಗೆ ಪಡೆದ ಮುಕ್ಕೂರು ಸ.ಹಿ.ಪ್ರಾ.ಶಾಲೆಯ 4 ನೇ ತರಗತಿಯ ದೃತಿಲ್ ಆರ್ ಶೆಟ್ಟಿ, ಬೆಳ್ಳಾರೆ ಕೆಪಿಎಸ್ ನ 7 ನೇ ತರಗತಿಯ ಮನಸ್ವಿ ಪಿ.ಎನ್, ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬೆಳ್ಳಾರೆ ಕೆಪಿಎಸ್ ನ 8 ನೇ ತರಗತಿಯ ಶ್ರುತನ್ ಕೆ, ದ್ವಿತೀಯ ಸ್ಥಾನ ಪಡೆದ 8 ನೇ ತರಗತಿಯ ಅದ್ವಿತ್ ರೈ, ಮೆಚ್ಚುಗೆ ಪಡೆದ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ9 ನೇ ತರಗತಿ ವಿದ್ಯಾರ್ಥಿನಿ ತನ್ವಿ ಸಿ.ಟಿ., ಬೆಳ್ಳಾರೆ ಕೆಪಿಎಸ್ ನ 8 ನೇ ತರಗತಿಯ ಪುಣ್ಯ ಅವರು ಬಹುಮಾನ ಗಳಿಸಿದ್ದಾರೆ‌

ಗಣೇಶೋತ್ಸವ ಸಮಿತಿ ಸದಸ್ಯ ಜಯಂತ ಕುಂಡಡ್ಕ, ಆಯಾ ಶಾಲಾ ಶಿಕ್ಷಕರು, ಎಸ್ ಡಿಎಂಸಿ ಸಮಿತಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here