ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ- ಮಾಹಿತಿ ಕಾರ್ಯಕ್ರಮ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಮಂಜುನಾಥ ರೈಯವರ ಅಧ್ಯಕ್ಷತೆಯಲ್ಲಿ ಶ್ರೀ ಶಾಂತದುರ್ಗಾ ದೇವಸ್ಥಾನದ ಶ್ರೀ ಶಾಂತದುರ್ಗಾ ಸಭಾಭವನದಲ್ಲಿ ಸೆ.7ರಂದು ನಡೆಯಿತು.

ವಲಯ ಮೆಲ್ವೀಚಾರಕ ಸೋಹನ್. ಜಿ ಯೋಜನೆಯ ವಿವಿಧ ಕಾರ್ಯಕ್ರಮ ಮತ್ತು ಸಾಲ ಸೌಲಭ್ಯಗಳ ಬಗ್ಗೆ ವಿವರಿಸಿದರು.ಸೇವಾ ಪ್ರತಿನಿಧಿ ಶಾಲಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸದಸ್ಯರ ಸಾಲದ ಅರ್ಜಿಗಳನ್ನು ಪರಿಶೀಲಿಸಿ ಸಾಲ ನೀಡುವ ಬಗ್ಗೆ ನಿರ್ಣಯಿಸಲಾಯಿತು. ಸರಕಾರದ ಪಶು ಸಂಗೋಪನಾ ಇಲಾಖೆಯಿಂದ ರೈತರಿಗೆ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಗ್ರಾಮದ ಪಶು ಸಖಿ ತೇಜಸ್ವಿನಿ ಮಾಹಿತಿ ನೀಡಿದರು. ಸರಕಾರದ ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಗ್ರಾಮದ ಕೃಷಿ ಸಖಿ ಹೇಮಾವತಿ ಮಾಹಿತಿ ನೀಡಿದರು.

ಶ್ರೀಹರಿ ತಂಡದ ಗಂಗಾಧರ ಸಿ.ಎಚ್ ಸ್ವಾಗತಿಸಿ ವಂದಿಸಿದರು. ಜವಾಬ್ದಾರಿ ತಂಡಗಳಾದ ಶ್ರೀಹರಿ ಪ್ರಗತಿ ಬಂಧು ತಂಡದ ಮಂಜುನಾಥ.ಕೆ ಹಾಗೂ ನಂದಾದೀಪ ಪ್ರಗತಿ ಬಂಧು ತಂಡದ ಯೋಗಿಶ ತಮ್ಮ ತಂಡದ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಕೆ ಒಕ್ಕೂಟದ ವರದಿ ವಾಚಿಸಿದರು. ಒಕ್ಕೂಟದ ಕೋಶಾಧಿಕಾರಿ ತಿಮ್ಮಪ್ಪ ಸಹಕರಿಸಿದರು. ದಾಖಲಾತಿ ಸಮಿತಿ, ಒಕ್ಕೂಟದ ಉಪ ಸಮಿತಿ ಹಾಗೂ ಒಕ್ಕೂಟದ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here