ಸರಕಾರಿ ಪ್ರ.ದರ್ಜೆ ಮಹಿಳಾ ಕಾಲೇಜಿನಿಂದ ಅಂತರ್-ಕಾಲೇಜು ಈಜು ಸ್ಪರ್ಧೆ

0

ಈಜು ಕ್ರೀಡೆಯು ಸಾಹಸ ಪ್ರವೃತ್ತಿಯನ್ನು ಬೆಳೆಸುತ್ತದೆ-ಪ್ರೊ| ಝೇವಿಯರ್ ಡಿ’ಸೋಜ

ಪುತ್ತೂರು: ಈಜು ಕ್ರೀಡೆಯು ವ್ಯಕ್ತಿಗಳಲ್ಲಿ ಸಾಹಸ ಪ್ರವೃತ್ತಿಯನ್ನು ಬೆಳೆಸುತ್ತದೆ ಜೊತೆಗೆ ದೈಹಿಕ ಆರೋಗ್ಯವನ್ನು ಸದೃಡಗೊಳಿಸುತ್ತದೆ ಎಂದು  ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೊ| ಝೇವಿಯರ್ ಡಿ’ಸೋಜರವರು ಹೇಳಿದರು. 

ಅವರು ಇತ್ತೀಚೆಗೆ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಈಜು ಸ್ಪರ್ಧೆಗಳ ಉದ್ಘಾಟನೆಯನ್ನು ನೆರವೇರಿಸುತ್ತಾ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ|ವೇದಶ್ರೀ ನಿಡ್ಯರವರು ಮಾತನಾಡಿ, ಇಂದು ಕ್ರೀಡೆಗಳತ್ತ ಯುವಜನರ ಆಸಕ್ತಿ ಕುಂದುತ್ತಿದೆ ಆದರೆ ಯುವಶಕ್ತಿಯ ಸಂಪೂರ್ಣ ಸದ್ಬಳಕೆ ಆಗಬೇಕಾದರೆ ಅವರು ಕ್ರೀಡೆಗಳಲ್ಲಿ ಆಸಕ್ತಿ ವಹಿಸಬೇಕು ಎಂದು  ಹೇಳಿದರು. 

ಮುಖ್ಯ ಅತಿಥಿ, ಮಂಗಳೂರು ವಿಶ್ವವಿದ್ಯಾನಿಲಯದ ವಿಭಾಗದ ಸಹಾಯಕ ನಿರ್ದೇಶಕ  ಪ್ರಸನ್ನಕುಮಾರ್ ರವರು  ವಿಶ್ವವಿದ್ಯಾನಿಲಯವು ಕ್ರೀಡಾಕ್ಷೇತ್ರಕ್ಕೆ ನೀಡುತ್ತಿರುವ ಬೆಂಬಲದ ಬಗ್ಗೆ ತಿಳಿಸಿದರು. ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರೊ|ಶೇಷಪ್ಪ ಹಾಗೂ ಕ್ರೀಡಾಕೂಟಕ್ಕೆ ವಿಶ್ವವಿದ್ಯಾನಿಲಯದ ವೀಕ್ಷಕರಾದ ಪ್ರೊಫೆಸರ್ ಕೇಶವ ಮೂರ್ತಿ ವೇದಿಕೆಯಲ್ಲಿ  ಹಾಜರಿದ್ದರು. ಕುಮಾರಿ ಶಿಲ್ಪ ಮತ್ತು ಬಳಗ ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕರಾದ ಸ್ಟೀವನ್ ಕ್ವಾಡ್ರಸ್ ಸ್ವಾಗತಿಸಿ, ಕಾಲೇಜಿನ ಕ್ರೀಡಾ ನಿರ್ದೇಶಕ ಎವರೆಸ್ಟ್ ರೊಡ್ರಿಗಸ್ ವಂದಿಸಿದರು. ಕುಮಾರಿ ಖುಷಿ ರೈ ಕಾರ್ಯಕ್ರಮ ನಿರ್ವಹಿಸಿದರು. 

LEAVE A REPLY

Please enter your comment!
Please enter your name here