ಪುತ್ತೂರು: ವಿದ್ಯಾಭಾರತಿ ಕರ್ನಾಟಕ ದ. ಕ ರಾಜ್ಯ ಮಟ್ಟದ ಜ್ಞಾನ – ವಿಜ್ಞಾನ ಮೇಳ- 2025-26 ಮೈಸೂರು ನಲ್ಲಿ ಆಯೋಜಿಸಿದ ಕ್ಲೇ-ಮಾಡೆಲಿಂಗ್ ನಲ್ಲಿ
ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅಜಿತೇಶ್ ಜೆ ಎನ್ ( ದಿ. ಜತ್ತಪ್ಪ ಗೌಡ ಹಾಗೂ ಶೀಮತಿ ಬೇಬಿ ರೇಖಾ ರವರ ಪುತ್ರ) ಇವರು ಪ್ರಥಮಸ್ಥಾನ ಪಡೆದು ತೆಲಂಗಾಣ ದಲ್ಲಿ ನಡೆಯಲಿರುವ ದಕ್ಷಿಣ ಭಾರತ ಪ್ರಾಂತ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಎಂದು ಸಂಸ್ಥೆಯ ಮುಖೋಪಾಧ್ಯಾಯ ಪ್ರಸನ್ನ ಕೆ ತಿಳಿಸಿರುತ್ತಾರೆ.
ಇವರಿಗೆ ಚಿತ್ರಕಲಾ ಶಿಕ್ಷಕ ಸುಚೇತ್ ಇವರು ತರಬೇತಿ ನೀಡಿದ್ದು, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು,ಸಂಚಾಲಕರು, ಸದಸ್ಯರು, ಮುಖ್ಯೋಪಾಧ್ಯಾಯರು ತರಬೇತಿಗೊಳಿಸಿದ ರವರನ್ನು ಹಾಗೂ ವಿದ್ಯಾರ್ಥಿಯನ್ನು ಅಭಿನಂದಿಸಿರುತ್ತಾರೆ.