ಚಿಕ್ಕಂದಿನಿಂದಲೇ ಸಂಪತ್ತು ಸೃಷ್ಟಿಸಲು ಪ್ರಾರಂಭಿಸಿ: ರಾಘವೇಂದ್ರ ಶೆಣೈ
ಪುತ್ತೂರು: ಚಿಕ್ಕಂದಿನಿಂದಲೇ ನಾವು ಸಂಪತ್ತು ಸೃಷ್ಟಿಸಲು ಪ್ರಾರಂಭಿಸಬೇಕು ಮತ್ತು ನಿರ್ವಹಣಾ ಶಾಸ್ತ್ರದ ವಿದ್ಯಾರ್ಥಿಗಳಾಗಿ ಯಾವ ಕಂಪೆನಿಯಲ್ಲಿ ಹೂಡಿಕೆ ಮಾಡಬೇಕು ಯಾವುದರಲ್ಲಿ ಮಾಡಬಾರದು ಎಂಬ ಸ್ಪಷ್ಟ ಅರಿವು ಇರಬೇಕೆಂದು ನಿಪ್ಪಾನ್ ಇಂಡಿಯಾ ಅಸ್ಸೇಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ ನ ಕ್ಲಸ್ಟರ್ ಮ್ಯಾನೇಜರ್ ರಾಘವೇಂದ್ರ ಶೆಣೈ ರವರು ಹೇಳಿದರು.

ಅವರು ಸೆ.9ರಂದು ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ಅಸೋಸಿಯೇಷನ್ ನ ಉದ್ಘಾಟನಾ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಂಶುಪಾಲ ಪ್ರೊ ದಾಮೋದರ ಕಣಜಾಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಲಭ್ಯವಿರುವ BBA ವಿಭಾಗವು ಅತ್ಯುತ್ತಮವಾಗಿದ್ದು ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ರ್ಯಾಂಕ್ ಪಡೆದ ಹಿರಿಮೆಯಿದೆ. ವಿದ್ಯಾರ್ಥಿಗಳು ಸಂಘದ ಚಟುವಟಿಕೆಗಳ ಮೂಲಕ ಸೃಜನಾತ್ಮಕ ಕೌಶಲ್ಯವನ್ನು ಪಡೆದುಕೊಳ್ಳಿ ಎಂದರು.
ಪ್ರಣಮ್ಯ ಹಾಗೂ ತಂಡದವರು ಪ್ರಾರ್ಥಿಸಿದರು. ಪ್ರೊ. ಅನಂತ ಭಟ್ ಸ್ವಾಗತಿಸಿದರು. ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುಳಾದೇವಿ ಪ್ರಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಐ ಕ್ಯೂ ಎ ಸಿ ಸಂಚಾಲಕ ಪ್ರೊ. ರಾಮಚಂದ್ರ ಡಿ, ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷ ಮನಿಶ್ ಬಿಬಿಎ, ಕಾರ್ಯದರ್ಶಿ ಅಂಕಿತಾ ಬಿ ಎಸ್ ಬಿಬಿಎ ಹಾಗೂ ಕೋಶಾಧಿಕಾರಿ ರಕ್ಷಿತಾ lಬಿಬಿಎ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಶೆಣೈ ರವರು ಮ್ಯೂಚುವಲ್ ಫಂಡ್ ಕುರಿತು , ಅದರ ಅನುಕೂಲಗಳು, ವಿಧಗಳು ಇತ್ಯಾದಿಗಳ ಕುರಿತು ಮಾಹಿತಿ ಕಾರ್ಯಗಾರ ನಡೆಸಿದರು .
ಅಕ್ಷಯ್ ಬಿಬಿಎ ನಿರೂಪಿಸಿದರು. ಅಂಕಿತಾ ಬಿಬಿಎ ವಂದಿಸಿದರು. ಕಾಲೇಜಿನ ಗ್ರಂಥಪಾಲಕ ರಾಮ ಕೆ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.