ಪುತ್ತೂರು: ಭಾರತ್ ಸ್ಕೌಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ವಾಮದಪದವು ವಲಯದ ದ್ವಿತೀಯ ಸೋಪಾನ, ದ್ವಿತೀಯ ಚರಣ ಪರೀಕ್ಷಾ ಶಿಬಿರ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರದಲ್ಲಿ ನಡೆಯಿತು.

ಈ ಪರೀಕ್ಷಾ ಶಿಬಿರದಲ್ಲಿ ಅಕ್ಷರ ಭಾರತಿ ಮತ್ತು ಬುರೂಜ್ ಶಾಲೆಯ ಕಬ್ ಬುಲ್, ಸ್ಕೌಟ್ ಗೈಡ್ ಮಕ್ಕಳು ಹಾಜರಾಗಿದ್ದರು. ಒಟ್ಟು 14 ಕಬ್, 19 ಬುಲ್ ಬುಲ್, 20 ಸ್ಕೌಟ್, 25 ಗೈಡ್ ಮಕ್ಕಳು ಮೌಖಿಕ,ಲಿಖಿತ, ವಿವಿಧ ರೀತಿಯ ಗಂಟುಗಳು ಹಾಗೂ ಚಟುವಟಿಕೆ ಮತ್ತು ಬೆಂಕಿ ರಹಿತ ಅಡುಗೆಯಲ್ಲಿ ಭಾಗವಹಿಸಿದರು. ವಾಮದಪದವು ವಲಯದ ಸ್ಕೌಟ್ ಗೈಡ್ ಅಧ್ಯಕ್ಷ ಆನಂದ ಆಚಾರ್ಯ, ಕಾರ್ಯದರ್ಶಿ ಸುಕೇಶ್ ಉಪಸ್ಥಿತರಿದ್ದರು. ಸ್ಕೌಟ್ ಗೈಡ್, ಕಬ್ ಬುಲ್ ಬುಲ್ ಶಿಕ್ಷಕರು ಪರೀಕ್ಷಾ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.