ಪುತ್ತೂರು : ಮೈಸೂರಿನ ಗೋಪಾಲಸ್ವಾಮಿ ಶಿಶು ವಿಹಾರ ಸಂಸ್ಥೆಯಲ್ಲಿ ನಡೆದ ‘ವಿದ್ಯಾಭಾರತಿ ಪ್ರಾಂತೀಯ ಜ್ಞಾನ -ವಿಜ್ಞಾನ ಮೇಳ` ಸ್ಪರ್ಧೆಗಳಲ್ಲಿ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿರುವರು.
ಬಾಲ ವಿಭಾಗದ ಸೃಜನಾತ್ಮಕ ಮಾದರಿ ಸ್ಪರ್ಧೆಯಲ್ಲಿ, 8ನೇ ತರಗತಿಯ ಜನ್ಯ ಪಿ. ( ಪ್ರಭಾಕರ ಜಿ. ಮತ್ತು ರೇಖಾ ಕೆ.ಜೆ ದಂಪತಿ ಪುತ್ರಿ) ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ಕಿಶೋರ ವಿಭಾಗದ ಗಣಿತ ಪ್ರಯೋಗ ಸ್ಪರ್ಧೆಯಲ್ಲಿ, 10ನೇ ತರಗತಿಯ ಶ್ಯಾಮ್ ಎಂ. ಎಚ್ (ಶ್ರೀಕೃಷ್ಣ ಗಣರಾಜ ಭಟ್ ಎಸ್. ಮತ್ತು ಸೌಮ್ಯ ಎಂ. ದಂಪತಿ ಪುತ್ರ ) ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.