ಪುತ್ತೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಹಾಯಕ ಪ್ರಾಧ್ಯಾಪಕರಾದ ಶಾಂತಿ ಕೆ. ಇವರು ನೆರವೇರಿಸಿ, ಸಮಯದ ನಿರ್ವಹಣೆಯ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳ ಮೂಲಕ ಸಮಯ ನಿರ್ವಹಣೆಯನ್ನು ಹೇಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವೊಕೇಟ್ ಅಶ್ವಿನ್ ಎಲ್. ಶೆಟ್ಟಿ ವಹಿಸಿದ್ದರು. ಹಣ ಮತ್ತು ಸಮಯ ಇವೆರಡು ತುಂಬಾ ಬೆಲೆಬಾಳುವಂತದ್ದು. ಇದರ ಸದುಪಯೋಗದ ಬಗ್ಗೆ ಇಂದಿನ ವಿದ್ಯಾರ್ಥಿಗಳು ಚೆನ್ನಾಗಿ ಅರಿತುಕೊಂಡರೆ ಮಾತ್ರ ಮುಂದಿನ ಜೀವನವು ಸುಗಮವಾಗಿ ಸಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ರಾಜಲಕ್ಷ್ಮೀ ಎಸ್.ರೈ ಅವರು ಪ್ರಾಸ್ತಾವಿಕವಾಗಿ ವಾಣಿಜ್ಯ ಸಂಘದ ಉದ್ಧೇಶ ಮತ್ತು ವಾಣಿಜ್ಯ ಸಂಘದ ಅಡಿಯಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಉಪಪ್ರಾಂಶುಪಾಲರಾದ ಶೇಷಗಿರಿ ಎಂ ವಾಣಿಜ್ಯ ಸಂಘ ಮುಖ್ಯಸ್ಥ ನಿರಂಜನ್ ವಿ, ಐ.ಕ್ಯೂ.ಎ.ಸಿ ಸಂಘಟನಾಧಿಕಾರಿ ಕೌಶಲ್ಯ, ವಿದ್ಯಾರ್ಥಿ ಸಂಘಟಕರಾದ ತೃತೀಯ ಬಿ.ಕಾಂ ನ ಮಿಥುನ್ ಮತ್ತು ಕೀರ್ತನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಿಥುನ್ ಸ್ವಾಗತಿಸಿ, ತೃತೀಯ ಬಿಕಾಂನ ನಂದಿನಿ ಆರ್ ವಂದಿಸಿದರು. ಉದ್ಘಾಟಕರ ವ್ಯಕ್ತಿ ಪರಿಚಯವನ್ನು ಕೀರ್ತನಾ ನೆರವೇರಿಸಿ, ತೃತೀಯ ಬಿ.ಕಾಂನ ಪ್ರಿಯಾಂಕ ಕಾರ್ಯಕ್ರಮವನ್ನು ನಿರೂಪಿಸಿದರು. ತೃತೀಯ ಬಿ.ಕಾಂ ನ ಸರಸ್ವತಿ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.