ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘ ಇದರ ಮಾರ್ಗದರ್ಶನದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘ, ಒಕ್ಕಲಿಗ ಸ್ವಸಹಾಯ ಟ್ರಸ್ಟ್,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಇವುಗಳ ಸಹಯೋಗದಲ್ಲಿ ತೆಂಕಿಲದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಶ್ರೀ ಗಣೇಶೋತ್ಸವದ ಅಂಗವಾಗಿ ನಡೆದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಒಕ್ಕಲಿಗ ಗೌಡ ಕುಂಬ್ರ ವಲಯದಿಂದ ಅಭಿನಂದನೆ ಕಾರ್ಯಕ್ರಮವು ಸೆ.9ರಂದು ಮಾಡಾವು ಅಂಗಡಿಹಿತ್ಲು ಶ್ರೀಧರ ಗೌಡರವರ ಗೆಸ್ಟ್ ಹೌಸ್ನಲ್ಲಿ ನಡೆಯಿತು. ವೇದಿಕೆಯಲ್ಲಿ ಒಕ್ಕಲಿಗ ಗೌಡ ಸಮಾಜ ಸೇವಾ ಸಂಘ ಕುಂಬ್ರ ವಲಯದ ಅಧ್ಯಕ್ಷ ಸತೀಶ್ ಗೌಡ ನೂಜಿ, ಗ್ರಾಮ ಸಮಿತಿ ಗೌರವ ಅಧ್ಯಕ್ಷ ರಾಮಣ್ಣ ಗೌಡ ಜ್ಯೋತಿ ನಿಲಯ, ಕುಂಬ್ರ ವಲಯ ಉಪಾಧ್ಯಕ್ಷ ಮೋಹನ್ ಗೌಡ ಎರಕ್ಕಳ, ಗ್ರಾಮ ಸಮಿತಿ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರಂಜಿತ್ ಗೌಡ ಕೈತಡ್ಕ, ಕುಂಬ್ರ ವಲಯ ಉಸ್ತುವಾರಿ ಬಾಲಕೃಷ್ಣ ಗೌಡ ಕೆಮ್ಮಾರ, ಶ್ರೀಧರ ಗೌಡ ಅಂಗಡಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.

ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸೆ ಪಡೆದ ಸುಮಾರು ೨೦ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ನೀಡಿ ಪ್ರೋತ್ಸಾಹಿಸಿ ಅಭಿನಂದಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ನೃತ್ಯ ಸಂಯೋಜನೆ ಮಾಡಿದ ನಿಖಿತಾ ಗೌಡ ಎರಕ್ಕಳರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಿಖಿತಾ ಗೌಡ ಎರಕ್ಕಳ ಮತ್ತು ಬಳಗದವರು ಪ್ರಾರ್ಥಿಸಿದರು. ಅಕ್ಷಯ ಕಾಲೇಜಿನ ಉಪನ್ಯಾಸಕಿ ಹರ್ಷಿತಾ ರಂಜಿತ್ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪದ್ಮಾವತಿ ಮೋಹನ್ ಗೌಡ ವಂದಿಸಿದರು.
ಈ ಸಂದರ್ಭದಲ್ಲಿ ಕಾವ್ಯ ಸತೀಶ್ ಗೌಡ ನೂಜಿ, ರೇಖಾ ಮೋಹನ್ ಗೌಡ ಎರಕ್ಕಳ, ನಯನಾ ಶರತ್ ಕುಮಾರ್ ಮಾಡಾವು, ಪೂರ್ಣೇಶ್ ಕಣಿಯಾರು, ಒಕ್ಕಲಿಗ ಯುವ ಸಂಘದ ಗ್ರಾಮ ಸಮಿತಿಯ ಪ್ರ.ಕಾರ್ಯದರ್ಶಿ ಸತ್ಯಪ್ರಕಾಶ್ ಗೌಡ ಕಣಿಯಾರು, ಯುವ ಒಕ್ಕಲಿಗ ಗೌಡ ಸಮುದಾಯ ಕುಂಬ್ರ ವಲಯದ ಕೋಶಾಧಿಕಾರಿ ಶುಭಪ್ರಕಾಶ್ ಎರಬೈಲು, ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ಅಧ್ಯಕ್ಷ ವಿಜಯ ಕುಮಾರ್ ಸಣಂಗಳ, ಪ್ರ.ಕಾರ್ಯದರ್ಶಿ ಚಿನ್ನಪ್ಪ ಗೌಡ ಮಾಡಾವು, ಒಕ್ಕಲಿಗ ಸ್ವಸಹಾಯ ಸಂಘದ ಪ್ರಧಾನ ಕಾರ್ಯದರ್ಶಿ ದೇವಿಕಾ ಶ್ರೀಧರ ಗೌಡ ಅಂಗಡಿಹಿತ್ಲು, ಹಾಲು ಸೊಸೈಟಿಯ ಮೋಹನ್ ಗೌಡ ಅಂಕತ್ತಡ್ಕ, ಶೋಭಾ ಬಂಗಾರ್ಗುಡ್ಡೆ, ಅರ್ಪಿತಾ ಎರಬೈಲು, ಲಲಿತಾ ರಾಮಣ್ಣ ಗೌಡ, ಹರ್ಷಿತಾ ರಂಜಿತ್ ಕೈತಡ್ಕ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.