ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರುಪಂಜ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸೆ.9ರಂದು ಸಂಘದ ಆವರಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಿದಾನಂದ ಸುವರ್ಣ ಗೆಣಸಿನಕುಮೇರು ಮಾತನಾಡಿ, 2005ರಲ್ಲಿ ಪ್ರಾರಂಭಗೊಂಡ ಸಂಘವು ಪ್ರಸ್ತುತ 264ಸದಸ್ಯರಿಂದ ರೂ.67,650 ಪಾಲು ಬಂಡವಾಳವನ್ನು ಹೊಂದಿದೆ. ಹಾಲು ಉತ್ಪಾದಕರಿಂದ 58,415.40 ಲೀಟರ್ ಹಾಲು ಖರೀದಿಸಿದೆ. 7,763.10 ಲೀಟರ್ ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. 52,279 ಲೀಟರ್ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 332 ಚೀಲ ಪಶು ಆಹಾರ ಮತ್ತು 291 ಕೆಜಿ ಲವಣ ಮಿಶ್ರಣ ಹಾಗೂ 91 ಕೆಜಿ ಸಂವೃದ್ಧಿ ಮಾರಾಟ ಮಾಡಲಾಗಿದೆ ಎಂದರು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿಯವರು ಮಾತನಾಡಿ, ಹೈನುಗಾರಿಕೆಗೆ ಸರಕಾರ ಹಾಗೂ ಒಕ್ಕೂಟದಿಂದ ದೊರೆಯುವ ವಿವಿಧ ಸವಲತ್ತುಗಳು ಮತ್ತು ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಬಹುಮಾನ ವಿತರಣೆ
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಗುಲಾಬಿ(ಪ್ರ) ಚಂದ್ರಶೇಖರ ಪ್ರಭು(ದ್ವಿ) ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು.
ಉಪಾಧ್ಯಕ್ಷ ಜಗನ್ನಾಥ ರೈ, ನಿರ್ದೇಶಕರಾದ ಮಹಾಬಲ ರೈ ವಳತ್ತಡ್ಕ, ಕೃಷ್ಣಪ್ಪ ನಾಯ್ಕ, ರಾಧಾಕೃಷ್ಣ ಜಿ., ಪುರುಷೋತ್ತಮ ನಾಯಕ್, ವಿಠಲ ಮಡಿವಾಳ, ಬಾಲಕೃಷ್ಣ ಪೂಜಾರಿ, ಶಾರದಾ ಹಾಗೂ ಲೋಕಯ್ಯ ನಾಯ್ಕವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕರಾದ ನಯನಾ ಸ್ವಾಗತಿಸಿದರು. ಗುಲಾಬಿ ವಂದಿಸಿದರು. ಕಾರ್ಯದರ್ಶಿ ಸಂಧ್ಯಾ ವಾರ್ಷಿಕ ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ಹಾಲು ಪರೀಕ್ಷಕಿ ಗೀತಾ ಸಹಕರಿಸಿದರು. ಕುಂಜೂರು ಪಂಜ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.