ನೆಲ್ಯಾಡಿ: ಏಣಿ ಹತ್ತಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಣಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರ್ಮಿಕ ಕೆಳಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ನೆಲ್ಯಾಡಿಯ ಹೆಚ್.ಪಿ.ಪೆಟ್ರೋಲ್ ಬಂಕ್ನಲ್ಲಿ ಸೆ.8ರಂದು ಮಧ್ಯಾಹ್ನ ನಡೆದಿದೆ.
ಬಜತ್ತೂರು ನಿವಾಸಿ ಹರ್ಷಿತ್ಕುಮಾರ್ (27ವ.)ಗಾಯಗೊಂಡವರಾಗಿದ್ದಾರೆ. ಹರ್ಷಿತ್ ಕುಮಾರ್ ಹಾಗೂ ಚೇತನ್ ಎಂಬವರು ನೆಲ್ಯಾಡಿಯ ಹೆಚ್ಪಿ ಪೆಟ್ರೋಲ್ ಬಂಕ್ನಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಈ ಪೈಕಿ ಹರ್ಷಿತ್ ಕುಮಾರ್ ಏಣಿ ಹತ್ತಿ ಗೋಡೆಗೆ ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಪೆಟ್ರೋಲ್ ಬಂಕ್ಗೆ ಪೆಟ್ರೋಲ್ ಹಾಕಲು ಬಂದ ವ್ಯಾಗನಾರ್ ಕಾರನ್ನು (ಕೆಎ19, ಎಂಜೆ 1214) ಅದರ ಚಾಲಕಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಏಣಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಏಣಿಯಲ್ಲಿ ನಿಂತು ಪೈಂಟ್ ಕೆಲಸ ಮಾಡುತ್ತಿದ್ದ ಹರ್ಷಿತ್ ಕುಮಾರ್ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ಹರ್ಷಿತ್ಕುಮಾರ್ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಅಲ್ಲಿಯ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ತೆರಳಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಗಾಯಾಳು ಹರ್ಷಿತ್ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.