ಸುಭಾಷಿಣಿ ಪಕ್ಕಳರವರ ಅದರ್ಶ ಬದುಕು ಸಮಾಜಕ್ಕೆ ಮಾದರಿ- ಸುಧಾಕರ್ ರೈ
ಪುತ್ತೂರು: ಮವಂತೂರು ಬಾರ್ಲ ದಿ.ವಿಠಲ್ದಾಸ್ ಪಕ್ಕಳರ ಪತ್ನಿ , ಬೆಳ್ಳಿಪ್ಪಾಡಿ ಯಜಮಾನ್ ದಿ.ಸಂಕಪ್ಪ ರೈಯವರ ಮೊಮ್ಮಗಳು, ಕುಂಡಕೋಳಿ ದಿ. ರೈ ಶೆಟ್ಟಿಯವರ ಪುತ್ರಿ ತಾಳಿಪಡ್ಪು ಸುಭಾಷಿಣಿ ಪಕ್ಕಳರವರು ನಿಧನರಾಗಿದ್ದು ಅವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ- ನುಡಿನಮನ ಕಾರ್ಯಕ್ರಮ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಸೆ.10 ರಂದು ಜರಗಿತು.

ಸಾಮಾಜಿಕ ಮುಂದಾಳು ಸುಧಾಕರ್ ರೈ ಪೆರಾಜೆ ಮಾತನಾಡಿ, ಸುಭಾಷಿಣಿ ಪಕ್ಕಳರವರು ಮನೆ ಮತ್ತು ಕುಟುಂಬ ಹಾಗೂ ಸಮಾಜವನ್ನು ಅಕ್ಕರೆಯಿಂದ ಕಾಣುತ್ತಿದ್ದರು, ಅವರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿದ್ದಾರೆ. ಅದನ್ನು ಅವರು ಮಕ್ಕಳು ಪಾಲಿಸಿಕೊಂಡು ಬರುತ್ತಿದ್ದಾರೆ. ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸಿಕೊಂಡಿರುವ ಸುಭಾಷಿಣಿ ಪಕ್ಕಳರವರ ಅದರ್ಶ ಬದುಕು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕರ್ನಲ್ ಎ,ಜಗಜೀವನ್ ಭಂಡಾರಿ ಮಾತನಾಡಿ, ಕುಟುಂಬದ ಪ್ರತಿ ಸಮಾರಂಭದಲ್ಲೂ ಭಾಗವಹಿಸುತ್ತಿದ್ದ ಸುಭಾಷಿಣಿ ಪಕ್ಕಳರವರು ಎಲ್ಲರನ್ನು ಅತ್ಮೀಯತೆಯಿಂದ ಗುರುತಿಸಿ, ಮಾತನಾಡುತ್ತಿದ್ದರು. ಅವರ ಅಕ್ಕರೆಯ ಮಾತು ನಮಗೆ ಸದಾ ನೆನಪಲ್ಲಿ ಇದೆ ಎಂದು ಹೇಳಿದರು. ಸುಭಾಷಿಣಿ ಪಕ್ಕಳರವರ ಮಕ್ಕಳಾದ ಮಹೇಶ್ ಪಕ್ಕಳ, ನಿತಿನ್ ಪಕ್ಕಳ, ರಾಜೇಶ್ ಪಕ್ಕಳ, ಸೊಸೆಯಂದಿರು, ಮೊಮ್ಮಕ್ಕಳು, ಆರ್ಬಿಐ ಮಾಜಿ ನಿರ್ದೇಶಕ ಸಹಕಾರರತ್ನ ಅಗರಿ ನವೀನ್ ಭಂಡಾರಿ, ತಾಳಿಪಡ್ಪು, ಕುಂಡಕೋಳಿ ಹಾಗೂ ಮವಂತೂರು ಬಾರ್ಲ ಕುಟುಂಬದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕ ಅಶೋಕ್ ಕುಮಾರ್ ರೈ ಮೃತರ ಮನೆಗೆ ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿದರು. ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ, ಮಲ್ಲಿಕಾ ಪ್ರಸಾದ್, ಸಂಜೀವ ಮಠಂದೂರು, ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಮುಖರಾದ ಅರಿಯಡ್ಕ ಚಿಕ್ಕಪ್ಪ ನಾೖಕ್, ಬೂಡಿಯಾರ್ ರಾಧಾಕೃಷ್ಣ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ಮಲ್ಲಿಕಾ ಪ್ರಶಾಂತ್ ಪಕ್ಕಳ, ಡಾ. ಮಂಜುನಾಥ ರೈ, ಡಾ. ಅಜಿತ್ ಹೆಗ್ಡೆ, ಡಾ. ದೀಪಕ್ ರೈ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, ಅರಿಯಡ್ಕ ಕೃಷ್ಣ ರೈ, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಮಿತ್ರಂಪಾಡಿ ಪುರಂದರ ರೈ, ವಿ.ಕೆ.ಜೈನ್ ಪುತ್ತೂರು, ವಾಮನ ಪೈ ದರ್ಬೆ, ಸಾಜ ರಾಧಾಕೃಷ್ಣ ಆಳ್ವ, ಶಿವರಾಮ ಆಳ್ವ ಕುರಿಯ, ಎನ್. ಚಂದ್ರಹಾಸ್ ಶೆಟ್ಟಿ, ಕುಂಡಕೋಳಿ ಶ್ರೀನಿವಾಸ್ ರೈ, ಉದ್ಯಮಿ ಪ್ರಕಾಶ್ ಶೆಟ್ಟಿ ಮಂಗಳೂರು, ವಿಜಯ ಬ್ಯಾಂಕ್ ಮಾಜಿ ಜಿ.ಎಂ ಶ್ರೀಧರ್ ಶೆಟ್ಟಿ, ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ, ಚಿಲ್ಲೆತ್ತಾರು ಜಗಜೀವನ್ದಾಸ್ ರೈ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.