ಬಡಗನ್ನೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಸಮಾಲೋಚನಾ ಸಭೆಯು ಸೆ. 11 ರಂದು ನಡೆಯಿತು.
ಸಭೆಯಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ಲೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳು ದೇವಸ್ಥಾನದಲ್ಲಿ ನಡೆಯುವ ಪೂಜಾ ಕೖೆಂಕರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ನಿಕಟಪೂರ್ವ ಅಧ್ಯಕ್ಷ ಮನೋಜ್ ರೖೆ ಪೇರಾಲು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರ್ಚಕ ಮಹಾಲಿಂಗ ಭಟ್ ಬಿ, ಜನಾರ್ದನ ಪೂಜಾರಿ ಪದಡ್ಕ, ಉದಯ ಕುಮಾರ್ ಪಡುಮಲೆ, ಪುರಂದರ ರೖೆ ಕುದ್ಕಾಡಿ, ಶ್ರೀನಿವಾಸ್ ಗೌಡ ಕನ್ನಯ, ಗೋಪಾಲ ನಾಯ್ಕ ದೊಡ್ಡಡ್ಕ, ಶಂಕರಿ ಪಟ್ಟೆ, ಶ್ರೀಮತಿ ಕನ್ನಡ್ಕ ನಿಕಟಪೂರ್ವ ಸದಸ್ಯರಾದ ಚಂದ್ದಶೇಖರ ಆಳ್ವ, ಗಿರಿಮನೆ, ಪ್ರಭಾಕರ ಗೌಡ ಕನ್ನಯ, ಪಡುಮಲೆ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೖೆವಗಳ ದೖೆವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ದಯಾ ರೖೆ ಬೆಳ್ಳಿಪ್ಪಾಡಿ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ಸ್ಥಳೀಯರಾದ ಸುನೀಲ್ ಕನ್ನಡ್ಕ, ನಾರಾಯಣ ಪಾಟಾಳಿ ಪಟ್ಟೆ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.